ಫೋಕರಿ ಗಣಪನ ಲೀಲೆಗಳು

ಫೋಕರಿ ಗಣಪನ ಲೀಲೆಗಳು

 

 
 
ಫೋಕರಿ ಗಣಪನ  ಲೀಲೆಗಳು     
 
 
 
 
ಬರಲಿ ಬರಲಿ  ಇನ್ನು ಬರಲಿ  ತೆಂಗಿನ ಮರದ ಗುಳಿಯಲ್ಲಿ ಬೀಳಲಿ     ೧.
 
 
ಬರಲಿ ಬರಲಿ   ಇನ್ನು  ಹುಂ ಇನ್ನು 
ಸರಿಯಾಗಿ ನೋಡಿಕೊಳ್ಳಪ್ಪಾ, ಸರಿ ನೋಡೂ  ಆಯ್ತಾ  ಹೊಸ ಮಾಸ್ತರು ಹೇಳ್ತಾನೆ ಇದ್ರೂ 
ಅವನಾದ್ದು ಅದೇ ರಾಗ , ಬರಲಿ ಇನ್ನು ಬರಲಿ , ಇನ್ನು ಬರಬಹುದು ಅಂತ    
 
ಸರಿಯಾಗಿ ನೋಡ್ಕೋ ಜಾಗ ಇದೆಯಲ್ಲಾ ಇನ್ನು 
 
ಇಷ್ಟಕ್ಕೂ ಮಾಸ್ತರು ನೋಡಲಾಗದ್ದು ಗಣಪನಿಗೆ ಮಾತ್ರ ಕಾಣುವಂತಹದ್ದು ಏನಪ್ಪಾ ಅಂತ ನಿಮಗೆ ಈಗಾಗಲೇ ಮಂಡೆ ಬಿಸಿ ಆಗಿರಲು ಸಾಕು 
ನಾನೇ ನಿಮಗೆ ಮೊದಲದನ್ನು ಹೇಳದೆ ತಪ್ಪು ಮಾಡಿದೆ ಬಿಡಿ 
ಗಣಪನ ಮನೆಯ ಇದಿರಿನಲ್ಲೇ ತೆಂಗಿನ ಸಸಿ ನೆಡಲು ಹೊಂಡ ತೋಡಿ ಇಟ್ಟಿದ್ದರು 
ಶಾಲೆ ಬಿಟ್ಟ ಕೂಡಲೇ ಮನೆಗೆ ಬರುವ ಜಾಯಮಾನವೇ ಇಲ್ಲದ ಗಣಪ ಅಲೆದಾಡಿಕೊಂಡು ಇರುವ ಸಮಯದಲ್ಲೇ ಊರಿಗೆ ಬಂದ ಹೊಸ ಮಾಸ್ತರ ಕಣ್ಣಿಗೆ ಬಿದ್ದ  
ಆತನೇ ಅವರನ್ನು ನಮ್ಮ  ಮನಿಗೆ ಕರಕೊಂಡು ಬರಲು ಅವ ಕಾರಲ್ಲೇ ಕೂತು ಇಡೀ ಊರೆಲ್ಲಾ ತಿರುಗಾಡಿಸಿ 
ತನ್ನ ಮನೆಗೆ ಬರುವ ಅತ್ಯಂತ ಕ್ಳಿಷ್ಟವಾದ ಓಣಿಯ ದಾರಿಯಲ್ಲಿ ಕರೆದುಕೊಂಡು ಬಂದಿದ್ದ.ಪ್ರಸ್ತುತ ಅವನ ಮನೆಯ ಓಣಿಯಲ್ಲಿಂದ ಅಂಗಳಕ್ಕೆ ಬಂದಿದೆ ಕಾರು ಅಲ್ಲಿ.........
ಗಣಪನ ಮನೆಗೆ ರಸ್ತೆಯೆಲ್ಲಿದೆ..? ಅಲ್ಲಿರುವುದು ಎತ್ತಿನ ಗಾಡಿ ಮಾತ್ರ ಹೋಗಲಾಗುವಂತ ದಾರಿ ಅಷ್ಟೆ. ಅವನ ಮನೆಯ ಅಂಗಣದಲ್ಲೂ ಅಷ್ಟೇ ತರೆಗೆಲೆಗಳ ರಾಶಿ ದನ ಕರುಗಳ ಸಗಳಿ , ಕೋಳಿ ಮರಿಗಳ , ಹೆಂಟೆ ಹುಂಜಗಳ ಸರ್ಕಸ್.
ಚಿಕ್ಕ ಚಿಕ್ಕ ಗಲ್ಲಿಗಳಲ್ಲಿ ಕಾರನ್ನು ತಿರುಗಾಡಿಸುವಾಗ ಮಾಸ್ಟ್ರ ಮಂಡೆಯಲ್ಲಿ ಒಂದೇ ......ಎಲ್ಲಿಯೋ ಏನೋ ತಪ್ಪಾಯ್ತಾ ಹೇಗೆ ಅಂತ ಯೋಚನೆ...
 ಆ ತಲೆ ಬಿಸಿಯಲ್ಲೇ ೨-೩ ಅನಾಹುತ ಸ್ವಲ್ಪದರಲ್ಲಿಯೇ ತಪ್ಪಿತ್ತು.
ಕಾರು ಬಂದು ಅವನ ಮನೆಯ ಕೋಳೀ ಗೂಡಿನ ಬಳಿ ನಿಲ್ಲಿಸಿ ಇಲ್ಲೇ ಎಂದ 
ತಾನು ಬಂದುದು ಭ್ರಾಹ್ಮಣರ ಮನೆ ಅಲ್ಲ ಹಾಗಾದರೆ ..?  
ಕಿವಿ ಗಾಳಿ ಹೋದ ಹಾಗೆ ಕುಣಿಯುವ ಕರು, ಕೋಳಿ, ಅದರ ಸಂಸಾರ, ನಾಯಿಗಳ ಒಡ್ಡೋಲಗ ಇಲ್ಲೆಲ್ಲಿಯಾ ಮಾಸ್ಟ್ರ ಮನೆ...?
ಓ..................... ಅಲ್ಲಿ ನೋಡಿ ದೂರದಲ್ಲಿ ಕಂಡೂ ಕಾಣದ ಹಾಗೆ ತೋರಿಸಿದ ಬೆರಳನ್ನು ಗಣಪ
ಮತ್ತೆ ಇಲ್ಲಿ ಯಾಕೆ ಕರೆದು ಕೊಂಡು ಬಂದೆ...?
ಅಲ್ಲಿಗೆ ಹೋದರೆ ನಾನು ಇಲ್ಲಿಗೆ ಬರಲಾಗುತ್ತಾ..? ಅವನ ಲೆಕ್ಕ ಯಾವಾಗಲೂ ಬೇರೆಯೇ.
 
ಬಂದದ್ದಾಯಿತು ಇನ್ನು ವಾಪಾಸ್ಸು ಹೋಗುವ ಪರಿ...?
 
ಆಗಲೇ ಮೇಲೆ ನೀವು ಮೊದಲು ಓದಿದ ಕಥೆ ನಡೆದದ್ದು.
ಮುಂದೇನಾಯಿತು ನೋಡೋಣ ಬನ್ನಿ.
 
ಅದೇ ಕಥೆ ... ಈಗಲೂ..
ಗಣಪ ಬನ್ನಿ ಹಿಂದೆ ಹಿಂದೆ ಅನ್ನುವುದೂ
ಮಾಷ್ಟ್ರು ನೋಡಿಕೋ ಸರಿಯಾಗಿ ನೋಡಿಕೋ ಅನ್ನುವುದೂ ನಡೆದೇ ಇತ್ತು.    ಆದರೆ ನಿಲ್ಲಿ ಆಗಲೇ....
ಇಬ್ಬರ ಕಾಂಬಿನೇಷನ್ ಸರಿಯಾಗದೇ ಹಿಂದೆ ಹಿಂದೆಯೇ ಬಂದ ಕಾರು  ತೆಂಗಿನ್ ಸಸಿ ನಡಲೆಂದು ಒಂದು ತಗ್ಗಿನ ಬದಿ ಬಂದು ಕೆಳಗಿಳಿಯಲಾ ಬೇಡವಾ ಕೆಳಗಿಳಿಯಲಾ ಬೇಡವಾ ಅಂತ ಯೋಚಿಸಿ ಯೋಚಿಸಿ ಸ್ವಲ್ಪ ಸಂಶಯದಲ್ಲಿ ನಿಂತಿತು.
 ಸಾಸಿವೆ ಕಾಳಿನ ನೂರೊಂದನೆಯ ಅಂಶದಂತರದಲ್ಲಿ...
ಅಗಲೇ ಗಣಪ ಕಿರಿಚಿದ 
ಅಲ್ಲೇ ನಿಲ್ಸಿ ಇನ್ನು ಸ್ವಲ್ಪ ಸಹಾ ಹಿಂದೆ ಹೋಗಬೇಡಿ ಸಾರ್......... ಗಣಪನ ಚೆಕ್.......
 
ನಿಜದಲ್ಲೂ ಹೊಸ ಮಾಸ್ಟ್ರ ತಲೆಬಿಸಿ ಮತ್ತೂ ಜಾಸ್ತಿಯಾಯ್ತು...... ಈ ಗಡಿಬಿಡಿಯಲ್ಲಿ ಕಾರು ಹಿಂದೆ ಹೋದರೆ... ಅಥವಾ ತಾನು ಕಾರು ನಿಲ್ಲಿಸಿ ಕೆಳಗೆ ಇಳಿಯಲಾ ಬೇಡವಾ ಕೆಳಗಿಳಿದಾಗ ಕಾರೇ ಗುಂಡಿಯಲ್ಲಿ ಬಿದ್ದರೆ...?
ಅದನ್ನು ಮತ್ತೆ ಅಲ್ಲಿಂದ ತೆಗೆಸುವುದು ಹೇಗೆ.  ಅಷ್ಟರಲ್ಲೇ  ಕಾರು ಸೀದಾ ತೆಂಗಿನ ಹೊಂಡಕ್ಕೇ ಇಳಿಯಿತು , ಬಾಗಿಲು ತೆಗೆಯಲೂ ಆಗದೆ ಕೆಳಗಿಳಿಯಲೂ ಆಗದೇ ಹೊಸ ಮಾಷ್ಟು ತಮ್ಮ ಕಾರಿನಲ್ಲೇ  ಬಂದಿಯಾಗಿ ಹೋದರು
 
ಯೋಚಿಸುತ್ತಾ ಮಾಸ್ಟ್ರ ತಲೆ ಬಿಸಿ ಮತ್ತೂ ಜಾಸ್ತಿಯಾಗಿ    ಲೆಕ್ಕದ ಮಾಸ್ಟ್ರ ಲೆಕ್ಕವೇ ತಪ್ಪಿ ಹೋಯ್ತು.
ಅಷ್ಟರಲ್ಲಿ 
................................................
 
 ಬೆಳಗಿನ ವಾಕಿಂಗ್ ಮುಗಿಸಿ ಹಾಲು ತರಲು ಪಾರ್ವತಿಯ ಮನೆಗೆ  ಬಂದ ಆಪ್ಪಯ್ಯ ತಮ್ಮ ಹಳೇ ಗೆಳೆಯನನ್ನು ಈರೀತಿಯಲ್ಲಿ ತೆಂಗಿನ ಸಸಿಯ ಗುಳಿಯಲ್ಲಿ ಇಡೀಯಾಗಿ ಕಾರಿನೊಂದಿಗೆ ಬೀಳುವುದನ್ನು ನೋಡದಿದ್ದರೆ ಈ ಗಣಪನ ಫೋಕರಿತನದ ಕೊಡುಗೆಯ ಮೊತ್ತ ಬೇರೆ ರೀತಿಯಲ್ಲಾಗುತ್ತಿತ್ತೇನೊ.
 
ಅಂತೂ ಅವರನ್ನು ಅವರ ಕಾರನ್ನೂ ಇಡೀಯಾಗಿ ಆ ಹೊಂಡದಿಂದ ಹೇಗೆ ಹೊರ ತರಲಾಯ್ತು ಎನ್ನುವುದು ನಿಮ್ಮ ಯೋಚನೆಗೆ ಬಿಡುತ್ತಾ........
 
ಹಾಗಲ್ಲದೆ ಅವನನ್ನು ಈ ರೀತಿಯಾಗಿ ಎಲ್ಲರೂ ಕರೀತಿದ್ರಾ...?
 
ಫೊಕರಿ ಗಣಪ ಬರಿ ಪೋಕ್ರಿ.
 
 

Comments