ಫ್ಯಾನೋ ನಾನೋ?

ಫ್ಯಾನೋ ನಾನೋ?

ಕವನ

 

  ಫ್ಯಾನೋ ನಾನೋ?

 

                                                     ಫ್ಯಾನೋ ನಾನೋ?

 

 

ಸುತ್ತಿ ಸುತ್ತಿ ನೀನು ನನಗೆ

ತಂಪನಿತ್ತೆ ನೋಡ

ಸುತ್ತಿ ಬಂದೆ ನಾನಾರಿಗು

ಸೊಂಪುಗೊಡದೆ ನಾಡ

 

ವಿದ್ಯುಚ್ಚೇತನವ ಪಡೆದು 

ಪರರ ತಾಪಗಳೆದೆ

ಭಗವಚ್ಚೇತನವ ಪಡೆದು

ನಾನಾರಿಗೆ ದುಡಿದೆ?

 

ನನ್ನ ನಿನ್ನ ದೇಹವೆರಡು

ಪಂಚಭೂತದುದಯ

ನಿನ್ನಜನ್ಮವರ್ಥಪೂರ್ಣ

ನನ್ನದೆ ನಿರರ್ಥಕ

 

ನಿನ್ನ ಸ್ಫೂರ್ತಿ ಪಡೆದು ಅಳಿಲ

ಸೇವೆ ಮಾಡಿ ಜಗದಿ

ಇನ್ನಾದರು ಪರರ ಹಿತಕೆ

ದೇಹ ಮೀಸಲಿಡುವೆ

 

 

ಹರಿದಾಸ ನೀವಣೆ ಗಣೇಶಭಟ್ಟ

ಕೋಡೂರು

 

Comments