ಬಂದುದು ಹೇಗೆ ?

ಬಂದುದು ಹೇಗೆ ?

ಕವನ

ಗಿಳಿಗಳ ಹಿಂಡಿದು ಸಭೆಯನು ಸೇರಿದೆ

ಒಣಗಿದ ವೃಕ್ಷದ ಕೊಂಬೆಯಲಿ

ಬಳಗದ ಹಿತವನು ಕಾಯುವ ಚಿಂತನೆ

ಬಿಸಿ ಬಿಸಿ ಚರ್ಚೆಯು ನಡುವಿನಲಿ

 

ಬತ್ತಿದೆ ಕೆರೆ ತೊರೆ,ನೀರಿನ ಕ್ಷಾಮವು

ಕಾಡಿದೆ ನಾಡನು ಬರಗಾಲ

ಬಾನಲಿ ಮೋಡವು ಮಳೆಯನು ಸುರಿಸದೆ

ಮುಗಿದಿದೆ ಈ ಸಲ ಮಳೆಗಾಲ

 

ಯಾವುದೊ ಗಿಳಿಮರಿ ಧುಮುಕಿತು ನಡುವಲಿ

ಕೂಗಿತು ಘೋಷಣೆ ಎಡೆಬಿಡದೆ

ಹೊಗೆಯನು ಹೋಲುವ ಅನಿಲವ ಸೂಸಿತು

ಹೇಗದು ಬಂದಿತು ಅರಿಯದಿದೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್