ಬಂದೆಯಾ ನೀ ಗೆಳತಿ... ಒಂದು ಗಝಲ್

ಬಂದೆಯಾ ನೀ ಗೆಳತಿ... ಒಂದು ಗಝಲ್

ಕವನ

ಕಟ್ಟಿರುವ ಕಂಚಿನ ಘಂಟೆಯ ನಾದದಲ್ಲಿ

ಬಂದೆ ನೀನು

ಬುಟ್ಟಿಯಲ್ಲಿ ಅರಳಿದ ಹೂಗಳ ಗಂಧದಲ್ಲಿ

ಬಂದೆ ನೀನು

 

ಚಿಟ್ಟೆಯ ಪುಕ್ಕದಿ ಅಗಣಿತ ಬಣ್ಣಗಳ

ಬಿಡಿಸಿದೇಕೆ

ಪಟ್ಟದರಸಿಯಾಗಿ ಬೀಗುವ ತೆರದಲ್ಲಿ

ಬಂದೆ ನೀನು

 

ದಿಟ್ಟಿಯ ಬೀರುತಲಿ ಚಾರುಹಾಸದ

ಮೊಗದಲಿರುವೆ

ತಟ್ಟನೆ ನೆನಪಾಗಿ ಸಾಗುವ ಮನದಲ್ಲಿ

ಬಂದೆ ನೀನು

 

ಮೊಟ್ಟಮೊದಲ ಪ್ರೀತಿಯ ಬಲೆಬೀಸಿದ

ಕಾಮಿನಿ

ದಟ್ಟವಿಹ ಕಾಡಿನ ಚದುರೆ ಮೌನದಲ್ಲಿ

ಬಂದೆ ನೀನು

 

ಗೊಟ್ಟಿಯ ಮಾಡುವ ಅಭಿನವನಗೆ

ಒಲಿದಿಹ ಪೋರಿ

ಕಟ್ಟುತಲಿ ಪ್ರೇಮಲೋಕ ಪುರದಲ್ಲಿ

ಬಂದೆ ನೀನು

 

-*ಶಂಕರಾನಂದ ಹೆಬ್ಬಾಳ* 

 

ಚಿತ್ರ್