ಬಚ್ಚಿಟ್ಟ ಮಾತ ಬಾಯ್ಬಿಡು

ಬಚ್ಚಿಟ್ಟ ಮಾತ ಬಾಯ್ಬಿಡು

ಬರಹ

 

ಮನದನ್ನೆ ನಿನ್ನ ಮನದಾಳದಿಂದ 
ಮನಮಿಡಿಯುವಂತೆ ನುಡಿ ಮನದೊಳಡಗಿದ ಮಾತ ||
ಕನಸಲ್ಲಿ ಕನವರಿಸಿ ಕಿವಿಕಚ್ಚುವಂತೆ
ನಿಶೆಯಲ್ಲಿ ಹಪಹಪಿಸಿ ಮನಮುಟ್ಟುವಂತೆ |
ಕವಿಕವಿದು ಕಾರ್ಮೋಡ ಮಳೆಗೆರೆಯುವಂತೆ
ಧರೆಗಿಳಿದು ಸುರರು ವರವೀಯುವಂತೆ ||೧||
ನೀನಿಟ್ಟ ಕಿಚ್ಚು ನೀನೆಂಬ ಹುಚ್ಚು ಅಚ್ಚೊತ್ತುವಂತೆ
ಒಂದೊಂದು ಪದದಲ್ಲು ಪದವೀಯುವಂತೆ |
ಅಘಹರಿದು ಸುಮಹರಡು ಘಮಘಮಿಸುವಂತೆ ||೨||
ನೀನನ್ನ ಒಲವು ನೀನನ್ನ ಜಗವು
ನೆನೆದವನು ನಾನು ನೆಲೆಯೂರು ಇಲ್ಲೇ |
ಸರಿಯಾರು ನಿನಗೆ ಸರಿಸುವರು ಯಾರು
ವರಿಸುವನು ನಾನು, ಧ್ವನಿ ಹರಿಯುವಂತೆ ||೩||

 

ಮನದನ್ನೆ ನಿನ್ನ ಮನದಾಳದಿಂದ 

ಮನಮಿಡಿಯುವಂತೆ ನುಡಿ ಮನದೊಳಡಗಿದ ಮಾತ ||


ಕನಸಲ್ಲಿ ಕನವರಿಸಿ ಕಿವಿಕಚ್ಚುವಂತೆ

ನಿಶೆಯಲ್ಲಿ ಹಪಹಪಿಸಿ ಮನಮುಟ್ಟುವಂತೆ |

ಕವಿಕವಿದು ಕಾರ್ಮೋಡ ಮಳೆಗೆರೆಯುವಂತೆ

ಧರೆಗಿಳಿದು ಸುರರು ವರವೀಯುವಂತೆ ||೧||


ನೀನಿಟ್ಟ ಕಿಚ್ಚು ನೀನೆಂಬ ಹುಚ್ಚು ಅಚ್ಚೊತ್ತುವಂತೆ

ಒಂದೊಂದು ಪದದಲ್ಲು ಪದವೀಯುವಂತೆ |

ಅಘಹರಿದು ಸುಮಹರಡು ಘಮಘಮಿಸುವಂತೆ ||೨||


ನೀನನ್ನ ಒಲವು ನೀನನ್ನ ಜಗವು

ನೆನೆದವನು ನಾನು ನೆಲೆಯೂರು ಇಲ್ಲೇ |

ಸರಿಯಾರು ನಿನಗೆ ಸರಿಸುವರು ಯಾರು

ವರಿಸುವನು ನಾನು, ಧ್ವನಿ ಹರಿಯುವಂತೆ ||೩||