ಬಟಾಟೆ ಅವಲಕ್ಕಿ ಒಗ್ಗರಣೆ
ದಪ್ಪ ಅವಲಕ್ಕಿ ೧ ಕಪ್, ಆಲೂಗಡ್ಡೆ ಮೀಡಿಯಂ ಗಾತ್ರ ೨, ದೊಡ್ಡ ನೀರುಳ್ಳಿ ೧, ಕಾಯಿಮೆಣಸು ೨, ಕೊತ್ತಂಬರಿ ಸೊಪ್ಪು, ಒಗ್ಗರಣೆಗೆ ಸಾಸಿವೆ, ಜೀರಿಗೆ ತಲಾ ೧ ಚಮಚ, ಕರಿಬೇವು ಸೊಪ್ಪು, ಎಣ್ಣೆ. ರುಚಿಗೆ ಉಪ್ಪು. ಚಿಟಿಕೆಯಷ್ಟು ಸಕ್ಕರೆ, ಅರ್ಧ ತುಂಡು ಲಿಂಬೆ ರಸ. ಅರಸಿನ ಹುಡಿ ೧ ಚಮಚ, ಹುರಿದ ನೆಲಕಡಲೆ ಸ್ವಲ್ಪ.
ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ೧೦ ನಿಮಿಷ ನೆನೆಸಿ. ಬಾಣಲೆಯನ್ನು ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕಾಯಿಮೆಣಸು, ಕತ್ತರಿಸಿದ ನೀರುಳ್ಳಿ, ಕರಿಬೇವು ಹಾಕಿ ಹುರಿಯಿರಿ. ಅದಕ್ಕೆ ನೆನೆಸಿಟ್ಟ ಅವಲಕ್ಕಿ, ಬೇಯಿಸಿದ ಬಟಾಟೆ, ಉಪ್ಪು, ಅರಸಿನ ಹುಡಿ, ನೆಲಕಡಲೆ, ಸಕ್ಕರೆ ಹಾಕಿ ಒಂದೆರಡು ಚಮಚ ನೀರು ಹಾಕಿ ಬಾಣಲೆಗೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. ಬೆಂದ ಬಳಿಕ ಲಿಂಬೆ ರಸವನ್ನು ಹಾಕಿ. ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಅಲಂಕರಿಸಿ. ಬಿಸಿ ಬಿಸಿಯಾಗಿ ತಿನ್ನಲು ರುಚಿಕರ.