ಬಟಾಟೆ ತಾಲಿಪಟ್ಟು

ಬಟಾಟೆ ತಾಲಿಪಟ್ಟು

ಬೇಕಿರುವ ಸಾಮಗ್ರಿ

ಬೇಯಿಸಿ ಸಿಪ್ಪೆ ತೆಗೆದ ಬಟಾಟೆ (ಆಲೂಗೆಡ್ಡೆ) - ೪, ಗೋಧಿ ಹಿಟ್ಟು - ೨ ಕಪ್, ಹಸಿ ಶುಂಠಿ - ಸಣ್ಣ ತುಂಡು, ಇಂಗು - ಚಿಟಿಕೆ, ಜೀರಿಗೆ ೧ ಚಮಚ, ಹಸಿಮೆಣಸಿನ ಕಾಯಿ ಪೇಸ್ಟ್ - ಬೇಕಾಗುವಷ್ಟು, ಕತ್ತರಿಸಿದ ಕೊತ್ತಂಬರಿ ಸೊಪ್ಪು- ೩ ಚಮಚ, ಎಣ್ಣೆ - ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಬೇಯಿಸಿದ ಬಟಾಟೆಯನ್ನು ಗಂಟುಗಳಿರದ ಹಾಗೆ ಚೆನ್ನಾಗಿ ಹುಡಿ ಮಾಡಿ. ಅದಕ್ಕೆ ಹಸಿಮೆಣಸಿನ ಕಾಯಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಜೀರಿಗೆ, ಇಂಗು, ಶುಂಠಿ, ಉಪ್ಪನ್ನು ಹಾಕಿ ಕಲಸಿ ಮಿಶ್ರಣ ತಯಾರಿಸಿರಿ. ನಂತರ ಗೋಧಿ ಹಿಟ್ಟಿಗೆ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಇಡಿ. ಕಲಸಿಟ್ಟುಕೊಂಡಿದ್ದ ಹಿಟ್ಟಿನಿಂದ ಪೂರಿ ಲಟ್ಟಿಸಿ ಅದರ ಮೇಲೆ ಬಟಾಟೆ ಮಿಶ್ರಣ ಹಾಕಿ ಮಡಚಿ ನಿಧಾನವಾಗಿ ಲಟ್ಟಿಸಿ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿದರೆ ಬಿಸಿ ಬಿಸಿ ಬಟಾಟೆ ತಾಲಿಪಟ್ಟು ತಿನ್ನಲು ತಯಾರು.