ಬಟಾಟೆ ರವಾ ಫ್ರೈ

ಬಟಾಟೆ ರವಾ ಫ್ರೈ

ಬೇಕಿರುವ ಸಾಮಗ್ರಿ

ದೊಡ್ಡ ಗಾತ್ರದ ಬಟಾಟೆ ೨, ಬೋಂಡಾ ಮಸಾಲೆ ಅಥವಾ ಫಿಷ್ ಫ್ರೈ ಮಸಾಲೆ, ಬೇಕಾದಲ್ಲಿ ಉಪ್ಪು, ಎಣ್ಣೆ, ಸಜ್ಜಿಗೆ ರವಾ (ಉಪ್ಮಾ ರವಾ)

ತಯಾರಿಸುವ ವಿಧಾನ

ಮೊದಲಿಗೆ ಬಟಾಟೆಯನ್ನು ಚೆನ್ನಾಗಿ ತೊಳೆದು ವೃತ್ತಾಕಾರದಲ್ಲಿ ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ. ಅದಕ್ಕೆ ಫಿಷ್ ಫ್ರೈ /ಬೋಂಡಾ ಮಸಾಲವನ್ನು ನೀರಿನಲ್ಲಿ ಕಲಸಿ ಪೇಸ್ಟ್ ತರಹ ಮಾಡಿ ಚೆನ್ನಾಗಿ ತಾಗಿಸಿ. ಉಪ್ಪು ಬೇಕಾದಲ್ಲಿ ರುಚಿಗೆ ತಕ್ಕಷ್ಟು ಹಾಕಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಮಸಾಲೆ ತಾಗಿಸಿಟ್ಟ ಬಟಾಟೆಯ ತುಂಡುಗಳನ್ನು ರವಾದಲ್ಲಿ ಹೊರಳಿಸಿ ಎಣ್ಣೆಯಲ್ಲಿ ಬಿಡಿ. ಚೆನ್ನಾಗಿ ಕಾದ ನಂತರ ಬಾಣಲೆಯಿಂದ ತೆಗೆಯಿರಿ. ಮಳೆ ಬೀಳುವ ಸಮಯದಲ್ಲಿ ಬಿಸಿ ಬಿಸಿಯಾಗಿ ತಿನ್ನಲು ರುಚಿಕರವಾಗಿರುತ್ತದೆ. ಊಟಕ್ಕೂ ಹಿತಕರ.