'ಬಡಗನಾಡು ಸಂಘ,' ಶೇಶಾದ್ರಿಪುರಂ, ಬೆಂಗಳೂರು, ತನ್ನ '[[ವಜ್ರಮಹೋತ್ಸವ]],' ವನ್ನು ಆಚರಿಸಿಕೊಳ್ಳುತ್ತಿದೆ !
ಸಾವಿರಾರು ವಿದ್ಯಾರ್ಥಿಗಳಿಗೆ, ವಸತಿ-ಊಟಗಳ ಸೌಕರ್ಯವನ್ನು ಅತ್ಯಂತ ಕಡಿಮೆಬೆಲೆಯಲ್ಲಿ, ನೀಡುತ್ತಾ ಬಂದಿರುವ, ಬಡಗನಾಡು ಸಂಘ, ದ ಸ್ಥಾಪನೆಯಾದದ್ದು, ೧೯೪೩ ರಲ್ಲಿ. ದಕ್ಷಿಣಬೆಂಗಳೂರಿನ, ಬಸವನಗುಡಿಯ ಯಲ್ಲಿರುವ, ಬೆಣ್ಣೆಗೋವಿಂದಪ್ಪನವರಛತ್ರ , ದಲ್ಲಿ ಬಡಗನಾಡುಸಂಘವು ಪ್ರಾರಂಭವಾಯಿತು. ಅಂದಿನ ಮೈಸೂರಿನ ಅರಸರಾಗಿದ್ದ, ಶ್ರೀ. ಜಯಚಾಮರಾಜೆಂದ್ರ ಒಡೆಯರ್, ರವರಿಂದ ಸ್ಥಳವನ್ನು ಪಡೆದು, ಹಾಲಿ ಇರುವ 'ಕುಮಾರಾಪಾರ್ಕ್' ಸ್ಥಳದಲ್ಲಿ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಲಾಯಿತು. ಇದೆಲ್ಲದರ ಹಿಂದೆ ಬಡಗನಾಡು ಜನಾಂಗದ ಹಿರಿಯರ ದೂರದೃಷ್ಟಿ ಮತ್ತು ಮುಂದಲೋಚನೆಯೇ ಪ್ರಮುಖವಾಗಿದೆ. ಗ್ರಾಮೀಣಭಾಗದ ವಿಧ್ಯಾರ್ಥಿಗಳಿಗೆ ಬೆಂಗಳೂರಿನಂಥ ಮಹಾನಗರಲ್ಲಿ ವ್ಯಾಸಂಗಮಾಡಲು ಅನುಕೂಲತೆಗಳನ್ನು ಕಲ್ಪಿಸುವುದೇ ಅವರ ಗುರಿಯಾಗಿತ್ತು.
ಬಡಗನಾಡುಸಂಘ ಮೊದಲಿನಿಂದಲೂ ವಿದ್ಯಾರ್ಥಿಗಳನ್ನು ಕೇಂದ್ರಬಿಂದುವಾಗಿಟ್ಟುಕೊಂಡು, ಅವರ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಟ್ಟು, ಮನೆಯಿಂದ ದೂರದಲ್ಲಿ ಓದುತ್ತಿರುವ ಮಕ್ಕಳಿಗೆ, ಮಾನಸಿಕ ತೊಳಲಾಟ ಬರದಂತೆ ನೋಡಿಕೊಳ್ಳುತ್ತಾ ಬಂದಿದೆ. ಈಗ, ಜಾಗದ ಕೊರತೆಯಿಂದಾಗಿ ಹೊರಾಂಗಣದ ಆಟದ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. (ಎರಡು ದಶಕಗಳ ಹಿಂದೆ, ವಾಲೀಬಾಲ್ ಮುಂತಾದ ಆಟಗಳನ್ನು ವಿದ್ಯಾರ್ಥಿಗಳು ಅಂಘದ ಮೈದಾನದಲ್ಲಿ ಆಡುತ್ತಿದ್ದರು. ಆಗ ಹೆಚ್ಚಿಗೆ ಕಟ್ಟಡಗಳು ಇನ್ನೂ ಬಂದಿರಲಿಲ್ಲ. ಈಗ, ಸಂಘದ ಒಳಾಂಗಣದ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹವನ್ನು ಕೊಡಲಾಗಿದೆ. ಬಡಗನಾಡು ಸಂಘವು ಒಳ್ಳೆಯ ಪುಸ್ತಕ-ಭಂಡಾರ ಇತ್ಯಾದಿಗಳನ್ನು ಹೊಂದಿದೆ.
ಮಲ್ಲೇಶ್ವರ ಬಡಾವಣೆಯಲ್ಲಿ, ’ಬಡಗನಾಡು ಭವನ”, ದ ಸ್ಥಾಪನೆ :
ಒಂದು ದಶಕದ ಹಿಂದೆ, ಮಲ್ಲೇಶ್ವರ ಬಡಾವಣೆಯಲ್ಲಿ ದಾನವಾಗಿ ಬಂದ ಜಾಗದಲ್ಲಿ 'ಬಡಗನಾಡು ಭವನ' ನಿರ್ಮಿಸಿ ಬಡಗನಾಡು ಬಾಂಧವರಿಗೆ ರಿಯಾಯಿತಿ ದರದಲ್ಲಿ ಶುಭಸಮಾರಂಭಗಳಿಗೆ ಬಾಡಿಗೆ ಕೊಡುವ ಮೂಲಕ ಮತ್ತೊಂದು ಸಾಧನೆಯ ಗರಿಯನ್ನು ಸಂಘ ತನ್ನ ಮುಡಿಗೇರಿಸಿಕೊಂಡಿದೆ.
ಬಡಗನಾಡು ಸಂಘದ ಮುಂದಿರುವಹಲವು ಯೋಜನೆಗಳು :
* ಕುಮಾರಪಾರ್ಕನಲ್ಲಿರುವ ಕಟ್ಟಡದ ಅಭಿವೃದ್ಧಿ,
* ಹೆಚ್ಚುಹೆಚ್ಚು ವಿದ್ಯಾರ್ಥಿಗಳಿಗೆ ಸ್ಥಳಾವಕಾಶ,
* 'ವಿದ್ಯಾರ್ಥಿನಿಯರ ವಸತಿ-ನಿಲಯ' ದ ಸ್ಥಾಪನೆ.
* ವೃದ್ಧಾಶ್ರಮ, ಹಾಗೂ
* ಸದಸ್ಯರ ಕಲ್ಯಾಣ ನಿಧಿ ಸ್ಥಾಪನೆ, ಮುಂತಾದವುಗಳು.
ಒಟ್ಟಿನಲ್ಲಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಾ ಬೆಳೆಯುತ್ತಾ ಸಾಗುವ ಪ್ರಕ್ರಿಯೆ ಎಲ್ಲರಿಗೂ ಮಾದರಿಯಾಗಿರುವಂತಿರಬೇಕಾಗಿದೆ.
ವಜ್ರಮಹೋತ್ಸವದ ವಿಶೇಷತೆಗಳು :
** ಜುಲೈ, ೬, ಮತ್ತು ೭ ರಂದು ವಜ್ರಮಹೋತ್ಸವದ ವಿಧಿಗಳು ವಿಜೃಂಭಣೆಯಿಂದ ನೆರೆವೇರಿಸಲು ಎಲ್ಲಾ ಏರ್ಪಾಟುಗಳನ್ನೂ ಮಾಡಿಕೊಳ್ಳಲಾಗಿದೆ. ವಜ್ರಮಹೋತ್ಸವ ಸಮಾರಂಭವನ್ನು ಅತ್ಯಂತ ಯಶಸ್ವಿಯಾಗಿ ನೆರೆವೇರಿಸಲು, ಹಲವಾರು ಕಾರ್ಯಕಾರಿ-ಸಮಿತಿಗಳನು ದಾಖಲಿಸಲಾಗಿದೆ. ಜುಲೈ ೬ ನೇ ತಾರೀಖಿನಂದು ಬಡಗನಾಡು ಭಾನದಲ್ಲಿ, ಸ್ವಾಮಿಗಳ ಸಮ್ಮುಖದಲ್ಲಿ ಹೋಮ, ಹವನಾದಿಗಳು, ಆಶೀರ್ವಚನ, ಸಾಮೂಹಿಕ ಭೋಜನ, ಸಂಜೆ ಪ್ರತಿಭಾಪುರಸ್ಕಾರ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
** ಜುಲೈ, ೭ ರಂದು, ಸಂಜೆ, " ಚೌಡಯ್ಯ ಮೆಮೋರಿಯಲ್ ಹಾಲ್," ವೈಯಾಲಿಕಾವಲ್, ಸಭಾಂಗಣದಲ್ಲಿ ಬಡಗನಾಡು ಸಾಧಕರಿಗೆ ಸನ್ಮಾನ, ವಜ್ರಮಹೋತ್ಸವ ಸಮಾರೋಪ ಸಮಾರಂಭ ; ’ವಜ್ರಪಥ ”, ಸ್ಮರಣ ಸಂಚಿಕೆಯ ಬಿಡುಗಡೆ ಹಾಗೂ ಸಾಸ್ಕೃತಿ ಕಾರ್ಯಕ್ರಮಗಳಿವೆ. ಈ ವಿಶೇಷ ಸಂಚಿಕೆಯಲ್ಲಿ ಸಮಾಜಕ್ಕೆ ಉಪಯುಕ್ತವಾಗುವಂತಹ ಅನೇಕ ಲೇಖನಗಳನ್ನು ಕವಿತೆಗಳನ್ನೂ, ಸಂಘಕ್ಕೆ ಶ್ರಮಿಸಿದ ಹಿರಿಯರ ಬಗ್ಗೆ, 'ನೆನೆಪಿನ ಸರಮಾಲೆ,' ಮುಂತಾದವುಗಳನ್ನು ಸಂಪಾದಿಸಿ, ರಚಿಸಲಾಗಿದೆ.
ಎಲ್ಲರಿಗೂ ಆದರದ ಸ್ವಾಗತ.