ಬಡವನಾರು, ಬಲ್ಲಿದನಾರು?

ಬಡವನಾರು, ಬಲ್ಲಿದನಾರು?

ಬರಹ

ಇನ್ನೆರಡು ದಿನಗಳಲ್ಲಿ ಅಮೆರಿಕೆಯ ಅಧ್ಯಕ್ಷ ಒಬಾಮ ಅಮೆರಿಕೆಯ ಬಡತನ ದ ರೇಖೆಯನ್ನು ನಿರ್ಧರಿಸುವ ಕುರಿತ ನೀತಿಯನ್ನು ಪ್ರಕಟಿಸಲಿದ್ದಾರೆ. ಈಗಿರುವ ರೇಖೆ ತುಂಬಾ ಹಳೆಯದಾಗಿದ್ದು ಹೊಸತರ ಅಗತ್ಯ ಅಮೆರಿಕೆಗೆ ಇದೆಯಂತೆ. ತಿಂಗಳಿಗೆ ಸಾವಿರ ಡಾಲರ್ ವರಮಾನ ಇದ್ದವನೂ ಅಮೆರಿಕೆಯಲ್ಲಿ ಬಡವ. ಅಲ್ಲಿ ಅತೀ ಬಡವನ ಮನೆಯಲ್ಲೂ ಫ್ರಿಡ್ಜ್ ಇರುತ್ತದೆ.  ಹಾಗಾದರೆ ಬಡವ ಬಲ್ಲಿದ ಎಂದು ಹೇಗೆ ಅಳೆಯುವುದು? ಒಬ್ಬ ಹೇಳುತ್ತಾನೆ ನನ್ನ ಹತ್ತಿರ ಲ್ಯಾಪ್ ಟಾಪ್ ಇದೆ, ಸೆಲ್ ಫೋನ್ ಸಹ ಇದೆ, ಹೈ ಸ್ಪೀಡ್ ಇಂಟರ್ನೆಟ್ ಕನೆಕ್ಷನ್ ಇದೆ ಆದರೂ ನಾನು ಬಡವ ಎಂದು. ನಮ್ಮ ದೇಶದಲ್ಲಿ ಒಂದು ವರದಿಯ ಪ್ರಕಾರ ೪೫ ಕೋಟಿ ಜನರ ಒಂದು ದಿನದ ಆದಾಯ ಒಂದು ಡಾಲರ್ ಗಿಂತ ಕಡಿಮೆ. ಅಂದರೆ ಹೆಚ್ಚು ಕಡಿಮೆ ೪೫ ರೂಪಾಯಿಗಳು. ಒಂದೊಮ್ಮೆ ಕಾರಿದ್ದವನು ಶ್ರೀಮಂತ, ಈಗ ಕಾರಿಟ್ಟುಕೊಂಡವನ ದರ್ಜೆ ಮಧ್ಯಮ ದರ್ಜೆ. ನಮಗೆಷ್ಟಿದ್ದರೆ ನಾವು ಸ್ಥಿತಿವಂತರು? 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet