ಬಡವರ ಬಾಪು

ಬಡವರ ಬಾಪು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಡಾ. ಮಹಮದ್ ಯೂನಸ್, ಕನ್ನಡಕ್ಕೆ: ಎನ್. ಜಗದೀಶ್ ಕೊಪ್ಪ
ಪ್ರಕಾಶಕರು
ಅಭಿರುಚಿ ಪ್ರಕಾಶನ, ಸರಸ್ವತಿಪುರ, ಮೈಸೂರು.
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ: ೨೦೨೦

ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮಹಮದ್ ಯೂನಸ್ ಅವರ ಜೀವನ ಚರಿತ್ರೆಯೇ ‘ಬಡವರ ಬಾಪು' ಎಂಬ ಪುಸ್ತಕ. ಈ ಪುಸ್ತಕವನ್ನು ಖ್ಯಾತ ಬರಹಗಾರ ಎನ್. ಜಗದೀಶ್ ಕೊಪ್ಪ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. 

‘ಬಡತನವೆಂದರೆ ಶಾಪವಲ್ಲ, ಅದೊಂದು ವ್ಯವಸ್ಥೆ. ನಮ್ಮನ್ನಾಳುವ ಸರ್ಕಾರಗಳು ಮತ್ತು ಸಮಾಜದ ಕುರುಡುತನದಿಂದಾಗಿ ಸೃಷ್ಟಿಯಾಗಿರುವ ವ್ಯವಸ್ಥೆ ಎಂದು ಜಾಗತಿಕ ಬಡತನಕ್ಕೆ ಹೊಸ ಭಾಷ್ಯ ಬರೆದ ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಪ್ರೊ.ಮಹಮದ್ ಯೂನಸ್ ರವರು ದಾರ್ಶನಿಕ ಮನೋಭಾವದ ಹಾಗೂ ಈ ಜಗತ್ತು ಕಂಡ ಅಪರೂಪದ ಮಾತೃಹೃದಯದ ವ್ಯಕ್ತಿ.

ಮರದ ಕೆಳಗೆ ಕುಳಿತು ಚಪ್ಪಲಿ ಹೊಲೆಯುವ ಒಬ್ಬ ಚಮ್ಮಾರನಿಗೆ ಹೇಗೆ ಹೊಲಿಯಬೇಕು ಎಂದು ಪಾಠ ಹೇಳಬೇಡಿ. ಆತನಿಗೆ ಪಾದರಕ್ಷೆಗಳನ್ನು ತಯಾರಿಸುವ ಕಲೆ ರಕ್ತಗತವಾಗಿ ಬಂದಿರುತ್ತದೆ. ನಿಮಗೆ ನಿಜವಾಗಿ ಆತನಿಗೆ ಸಹಾಯ ಮಾಡಬೇಕು ಎನಿಸಿದರೆ, ಆತನ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿಕೊಟ್ಟು ಯೋಗ್ಯ ಬೆಲೆ ದೊರಕುವಂತೆ ಮಾಡಿ. ಇದರಿಂದಾಗಿ ಆತ ಘನತೆಯಿಂದ ಬದುಕುವಂತಾಗುತ್ತದೆ ಎಂದು ಆಧುನಿಕ ಪ್ರಭುತ್ವ ಮತ್ತು ಮಾರುಕಟ್ಟೆಯ ವ್ಯವಸ್ಥೆಗೆ ಚಾಟಿ ಏಟು ಬೀಸಿದವರು ಮಹಮದ್ ಯೂನಸ್.’ ಎಂದು ಪುಸ್ತಕದ ಬೆನ್ನುಡಿಯಲ್ಲಿ ಬರೆಯಲಾಗಿದೆ. 

ಭಾರತಕ್ಕಿಂತಲೂ ಕಠೋರವಾದ ಬಡತನವನ್ನು ಎದುರಿಸುತ್ತಿರುವ ಬಾಂಗ್ಲಾ ದೇಶದ ಆರ್ಥಿಕ ಸ್ಥಿತಿಗತಿಯ ಕುರಿತು ಈ ಪುಸ್ತಕದಲ್ಲಿ ಮಹತ್ವದ ವಿಚಾರಗಳನ್ನು ಮಂಡಿಸಿದ್ದು, ವಿಶ್ವದ ಗಮನ ಸೆಳೆದಿದೆ. ೧೬೮ ಪುಟಗಳನ್ನು ಹೊಂದಿರುವ ಕಿರು ಪುಸ್ತಕ ಆದರೆ ಮಹತ್ವದ್ದು.