ಬಡ್ತಿ ಸಿಕ್ಕಿದೆ
ಕವನ
ಬಡ್ತಿ ಸಿಕ್ಕಿದೆ ನನಗೆ ಬಡ್ತಿ ಸಿಕ್ಕಿದೆ
ಸೋದರ ಮಾವನಾಗಿ ನನಗೆ ಬಡ್ತಿ ಸಿಕ್ಕಿದೆ
ಅಕ್ಕರೆಯ ನನ್ನ ತಂಗಿಯು
ನೀಡಿದಳು ಸಿಹಿ ಸುದ್ದಿಯ
ತಾನು ಹುಟ್ಟಿ ನನಗೆ ಅಣ್ಣನ ಪದವಿ ತಂದವಳು
ತಾನು ತಾಯಿಯಾಗಿ ನನಗೆ ಮಾವನ ಪದವಿ ನೀಡಿದಳು
!!ಬಡ್ತಿ ಸಿಕ್ಕಿದೆ ನನಗೆ ಬಡ್ತಿ ಸಿಕ್ಕಿದೆ!!
ನನ್ನ ಮನೆಯ ಸಿರಿದೇವತೆ
ನಾನು ಸಲ್ಲಿಸುವೇ ಕೃತಜ್ಞತೆ
ತಾಳ್ಮೆಯ ಫಲವು ದೊರೆತಿದೆ
ಸಂತಸವನ್ನು ಜೊತೆಗೆ ತರುತ್ತಿದೆ
!!ಬಡ್ತಿ ಸಿಕ್ಕಿದೆ ನನಗೆ ಬಡ್ತಿ ಸಿಕ್ಕಿದೆ!!
ಸೋದರಳಿಯ ಬಂದರೆ ಆನಂದ
ಸೋದರಸೊಸೆ ಬಂದರೆ ಪರಮಾನಂದ
ನಮ್ಮ ಮನೆದೇವರ ಒಲುಮೆಯಿಂದ
ಸುಸೂತ್ರವಾಗಿ ಈ ಭುವಿಗೆ ಬಂದರೆ ಸಾಕು ಕಂದ
!!ಬಡ್ತಿ ಸಿಕ್ಕಿದೆ ನನಗೆ ಬಡ್ತಿ ಸಿಕ್ಕಿದೆ!!
ಬರುವ ನನ್ನ ಮುದ್ದು ಕಂದಮ್ಮ
ಕರೆಯುವಾಗೆಷ್ಟು ಸಂತಸ ನನ್ನ ಮಾಮ
ಮಾವ ಆಗ್ತಿನಿ ನಾನು ಸೋದರ ಮಾವ ಆಗ್ತಿನಿ
ಸೋದರಳಿಯ ಸೊಸೆಯ ಜೊತೆಗೆ ಆಟ ಆಡ್ತಿನಿ
!!ಬಡ್ತಿ ಸಿಕ್ಕಿದೆ ನನಗೆ ಬಡ್ತಿ ಸಿಕ್ಕಿದೆ!!
- ತುಂಬೇನಹಳ್ಳಿ ಕಿರಣ್ ರಾಜು ಎನ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್