ಬಣ್ಣದ ಉಡುಪು
ಕವನ
ಸಣ್ಣನೆ ನಡುವಿನ ಬೆಡಗಿನ ನಾರಿ
ಬಣ್ಣದ ಛತ್ರಿಯ ಹಿಡಿದಳು ಪೋರಿ
ಕಣ್ಣುಗಳೆರಡು ತಿರುಗುವ ಬುಗುರಿ
ಹುಣ್ಣಿಮೆ ಬೆಳಕಿನ ನಗುವನು ಬೀರಿ
ಬೆಂದಿದೆ ಭೂಮಿಯು ಸುಡುತಿದೆ ಧರಣಿ
ಚಂದದಿ ಬಿಸಿಲನು ಮರೆಸುತ ತರುಣಿ
ಮುಂದಿದೆ ಸಾಲಲಿ ಹಬ್ಬದ ಸರಣಿ
ಬಂದಳು ಉಡುಪನು ಕೊಳ್ಳಲು ರಮಣಿ
ಕೊಂಡಳು ಚಂದದ ಬಣ್ಣದ ಉಡುಪು
ಬಂದಿತು ಬಾಲ್ಯದಿ ಧರಿಸಿದ ನೆನಪು
ತಂದಳು ಮನೆಗದ ತೊಳೆಯುವ ಹುರುಪು
ನೊಂದಳು,ಉಡುಪಲಿ ಉಳಿದುದು ಬಿಳುಪು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
