ಬಣ್ಣವಿಲ್ಲದ ಬದುಕು
ಕವನ
ಕುಂಚದಲಿ ಮುಗಿದಿಹುದು ಬಣ್ಣಗಳ ಲೇಪನ
ಮನದಲ್ಲಿ ಹುದುಗಿಹುವುದು ನೂರಾರು ಚಿತ್ರಣ
ಬರೆಯುವುದು ತಿಳಿದಿಹುವುದು ಬರೆಯಲಾಗದು, ಕಾರಣ
ಕುಂಚದಲಿ ಮುಗಿದಿಹುದು ಬಣ್ಣಗಳ ಲೇಪನ
ಬಣ್ಣಗಳ ಕೊರತೆ ಇಲ್ಲ, ಬಣ್ಣಿಸಲು ಸಮಯವಿಲ್ಲ
ಬಣ್ಣ ಕೇಳ ಹೋದರೆ ಅಲ್ಲಿ, ಭರವಸೆಯ ಉತ್ತರವಿಲ್ಲ
ಬಣ್ಣ ಕೇಳಿದರೂ ಕೊಡರು, ಕಾರಣ
ಕುಂಚದಲಿ ಮುಗಿದಿಹುದು ಬಣ್ಣಗಳ ಲೇಪನ