ಬಣ್ಣ ಕಳೆದುಕೊಂಡ ಬದುಕು

ಬಣ್ಣ ಕಳೆದುಕೊಂಡ ಬದುಕು

ಬರಹ

ಕಪ್ಪು ಕಪ್ಪಾಗಿಹ ಎಸಳು
ಉದುರಿ ಹೋಗಿಹ ಎಲೆಯು
ಮುರುಟಿ ಹೋಗಿಹ ದಂಟು
ಕೈಯಲ್ಲಿದೆ ಮುದುರಿ ಹೋಗಿಹ ಹೂವು

ಕೋಟುಗಳ ನಡುವೆ ನರಳಿ
ಸಭಾಂಗಣದ ನೆಲದಲ್ಲಿ ಹೊರಳಿ
ಅಲ್ಲಲ್ಲಿ ಚೆಲ್ಲಾಡಲ್ಪಟ್ಟಿಹ ಸುಮವು
ನರಳುತಿಲ್ಲವೇನು?

ಮುಂಜಾವ ಹೊತ್ತಿನಲ್ಲಿ
ಮಂಜಿನ ಮಳೆಯಲ್ಲಿ
ನಳ ನಳಿಸುತ್ತಿರಲಿಲ್ಲವೇನು ?
ತಂಗಾಳಿಗೆ ಮುಖವೊಡ್ಡಿ ನಗುತ್ತಿರಲಿಲ್ಲವೇನು?

ಕತ್ತರಿಯ ಏಟಿಗೆ ನಲುಗಿ
ವಿಕಲಾಂಗನಾಗಿರುತ
ಜನರ ಕೈಗೆ ಸಿಲುಕಿ
ಬದುಕಿನ ಬಣ್ಣ ಕಳೆದುಕೊಳ್ಳುತಿಲ್ಲವೇನು?

-ಸುಬ್ಬು
೦೭-೦೩-೨೦೦೩