ಬಣ್ಣ.

ಬಣ್ಣ.

ಬರಹ

ಬಣ್ಣ.

ಬಣ್ಣಾದ ಬದುಕಿಗೆ ಸುಣ್ಣಾವ ಬಳಿಯಣ್ಣ
ಕಣ್ಣ ಕುಕ್ಕುವಾ ಬಣ್ಣಾವಿದಣ್ಣಾ||

ಬಣ್ಣಾದ ಗುಣಗಾಳ ಜಣಜಣ ಹಣಗಾಳ
ಹೆಣದಂತ ಬದುಕೀದು ಸಣ್ಣಾವದಣ್ಣ|

ಹಣದಾ ಅರಿವಿರದಾ ಗುಣದಾ ಬರವಿರದಾ
ಚಿಣ್ಣಾರ ಗಣದೊಳಗ ಆಡಬೇಕಣ್ಣಾ|

ಬಣ್ಣೀಸದಿರು ತನ್ನ ನಿಂದಕ ಗುರು ನಿನ್ನ
ಬೆಣ್ಣೆ ಕದ್ದವನಾ ಬಣ್ಣೀಸಣ್ಣಾ|

ದಾನವೆ ಬಣ್ಣವು ಕರ್ಣನದಣ್ಣಾ
ಮಾನವೆ ಬಣ್ಣವು ಜಾಣರಿಗಣ್ಣಾ|

ಮಣ್ಣಿನ ಬಣ್ಣವು ಬಣ್ಣೀಸಲಸದಳವು
ಬಣ್ಣಕೆ ಮಣ್ಹಾಕಿ ತಣ್ಣಗಿರಣ್ಣಾ|

ಕಪ್ಪಾಗಿದ್ದರು ಬಣ್ಣ ಕಣ್ಣಾ ತುಂಬುವುದಣ್ಣ
ಕಂಡಾಗ ತಿರಿಪತಿಯ ತಿಮ್ಮಣ್ಣ||

ಆಹೋರಾತ್ರ.

೧೧:೩೫
೧/೩/೬.