ಬದನೆಕಾಯಿ ಗೊಜ್ಜು
ದುಂಡು ಬದನೆಕಾಯಿಗಳು - ೨-೩, ಕತ್ತರಿಸಿದ ಈರುಳ್ಳಿ - ಅರ್ಧ ಕಪ್, ಹುಣಸೆ ರಸ - ಕಾಲು ಕಪ್, ಮಸಾಲೆ ಹುಡಿ - ೨ ಚಮಚ, ತೆಂಗಿನ ತುರಿ - ಅರ್ಧ ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೪ ಚಮಚ, ಎಣ್ಣೆ - ೪ ಚಮಚ, ಸಾಸಿವೆ - ೧ ಚಮಚ, ಇಂಗು - ಕಾಲು ಚಮಚ, ಕರಿಬೇವಿನ ಎಲೆಗಳು - ೭-೮, ರುಚಿಗೆ ತಕ್ಕಷ್ಟು ಉಪ್ಪು.
ಮಸಾಲೆ ಹುಡಿಗೆ ಸಾಮಗ್ರಿಗಳು: ಒಣಮೆನಸಿನ ಕಾಯಿ - ೫-೬, ಕೊತ್ತಂಬರಿ ಬೀಜ - ೩ ಚಮಚ, ಜೀರಿಗೆ - ೨ ಚಮಚ, ಉದ್ದಿನ ಬೇಳೆ - ೧ ಚಮಚ, ಮೆಂತ್ಯೆ ಕಾಳು - ಅರ್ಧ ಚಮಚ, ಇಂಗು - ಕಾಲು ಚಮಚ, ಕಾಳು ಮೆಣಸು - ಅರ್ಧ ಚಮಚ.
ಮಸಾಲೆ ಪದಾರ್ಥಗಳನ್ನು ಹುರಿದು ಹುಡಿ ಮಾಡಿ. ಬದನೆಕಾಯಿಗಳನ್ನು ಒಲೆಯ ಮೇಲಿರಿಸಿ ಕಪ್ಪಾಗುವವರೆಗೆ ಬಿಸಿ ಮಾಡಿ. ತೊಟ್ಟು ಮತ್ತು ಸಿಪ್ಪೆಗಳನ್ನು ತೆಗೆದು ಬದನೆಯನ್ನು ಮಸೆದು ಬಿಡಿ. ಕಾದ ಎಣ್ಣೆಗೆ ಸಾಸಿವೆ, ಕರಿಬೇವು, ಇಂಗಿನ ಒಗ್ಗರಣೆ ಮಾಡಿ. ಈರುಳ್ಳಿ ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ ಹುಣಸೆ ರಸ, ಮಸಾಲೆ ಹುಡಿ, ಮಸೆದ ಬದನೆಕಾಯಿ, ಉಪ್ಪು ಹಾಕಿ ಕೈಯಾಡಿಸಿ ಒಲೆಯಿಂದ ಕೆಳಗಿರಿಸಿ. ತೆಂಗಿನಕಾಯಿ - ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.