ಬದನೆಕಾಯಿ ಹಿಂಡಿ
ಬೀಜ ಬಲಿಯದ ಬದನೆಕಾಯಿ -೩, ಈರುಳ್ಳಿ-೧, ತೆಂಗಿನ ತುರಿ ೧/೪ ಲೋಟ, ಎಣ್ಣೆ -೩ ಚಮಚ, ಹಸಿರು ಮೆಣಸು ೨-೩, (ಸೂಜಿ ಮೆಣಸಿನ ಪುಡಿಯಾದರೂ ಸರಿ) ಕರಿಬೇವು, ಒಣ ಮೆಣಸು-೨, ಉದ್ದಿನ ಬೇಳೆ, ಸಾಸಿವೆ, ಅರಿಸಿನ ಹುಳಿಪುಡಿ, ಇಂಗು ಉಪ್ಪು, ಸಿಹಿ ಬೇಕಾದಲ್ಲಿ ಉಪಯೋಗಿಸಿ.
ಬದನೆ ಕಾಯಿಯನ್ನು ಸ್ವಲ್ಪ ಎಣ್ಣೆ ಹಚ್ಚಿ ಚಿಕ್ಕ ಚಿಕ್ಕ ನಾಲ್ಕೈದು ತೂತು ಮಾಡಿ ಕೆಂಡದಲ್ಲಿ ಅಥವಾ ಗ್ಯಾಸ್ನಲ್ಲಿ ಬೇಯಿಸಿಕೊಳ್ಳಿ ಆಮೇಲೆ ಅದರ ಸಿಪ್ಪೆಯನ್ನು ತೆಗೆದು ಸೌಟಿನಲ್ಲಿ ಚೆನ್ನಾಗಿ ಜಜ್ಜಿ ಒಂದು ಪಾತ್ರೆಗೆ ಹಾಕಿಕೊಳ್ಳಿ ಇದಕ್ಕೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ತೆಂಗಿನ ತುರಿ, ರುಚಿಗೆ ಉಪ್ಪು, ಹುಳಿಪುಡಿ ಸಕ್ಕರೆ ಹಾಕಿ ನಂತರ ಒಂದು ಪಾತ್ರೆಯಲ್ಲಿ ಒಗ್ಗರಣೆಗೆ ಇಟ್ಟು ಎಣ್ಣೆ ಕಾದಮೇಲೆ ಉದ್ದಿನ ಬೇಳೆ, ಒಣಮೆಣಸಿನ ಚೂರು, ಹಸಿರು ಮೆಣಸು ಅಥವಾ ಮೆಣಸಿನ ಪುಡಿ, ಅರಿಸಿನ ಸಾಸಿವೆ ಕರಿಬೇವು ಇಂಗು ಹಾಕಿ ಚಟ್ ಪಟ್ ಎಂದ ಮೇಲೆ ಬದನೆ ಹೂರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿ. ಉಪ್ಪು ಹುಳಿ ಖಾರ ಸರಿಯಾಗಿ ಬಿದ್ದರೆ ಅನ್ನದ ಜೊತೆ ಚೆನ್ನಾಗಿರುತ್ತದೆ ರೊಟ್ಟಿಗೂ ಉಪಯೋಗಿಸಬಹುದು.
-ಕಲ್ಪನಾ ಪ್ರಭಾಕರ ಸೋಮನಳ್ಳಿ