ಬದಲಾಗಬೇಕಿದೆ...

ಬದಲಾಗಬೇಕಿದೆ...

ಕವನ

ಬದಲಾಗಬೇಕಿದೆ ಬದುಕೇ

ಭಾವನೆಗಳ ಭವಣೆಯ ಸುತ್ತ

ತಿರುಗುತ್ತಾ ತಿರುಕನಂತಿರುವ

ಬದುಕಿಗೊಂದು ಅಲ್ಪವಿರಾಮ ಬೇಕಿದೆ!...

 

ಕೊರಗುತ್ತಾ ಕನಸುಗಳ ಕಡೆಗೆ

ದೃಷ್ಟಿ ಹಾಯಿಸುವ ನಯನಗಳಿಗಿಂದು

ಕೊಂಚ ಕುತೂಹಲವ ಕೆರಳಿಸುವ

ಕಲ್ಪನೆಗಳು ಬೇಕಿದೆ...

 

ಕವಿತೆಯ ಸಾಲುಗಳನ್ನೇ ಕೆದರುತ್ತಾ

ಕೂತ ಕಣ್ಣುಗಳಿಗೆ ಕಹಿಯಲ್ಲದ

ಕಾವ್ಯವನು ಕಲಿಸಬೇಕಿದೆ;

ಕೈಬರಹ ಕವನವಾಗಬೇಕಿದೆ...

 

ಗಗನದಲಿ ಗಮ್ಯವನು ಗ್ರಹಿಸುವ

ಗಾಳಿಗೆ, ಪಟವೊಂದುಬೇಕಿದೆ!

ತೆರೆ ತೀರದ ಸೆಲೆಗಳನು ಸೀಳಿ

ಅದು ಗಾಳಿಪಟವಾಗಬೇಕಿದೆ...

 

ತನ್ನಾತ್ಮದ ತೃಪ್ತಿಗೆ ತರ್ಪಣವೆರೆದ

ತಿಳಿ ಬದುಕಿಗೆ ತೀರ್ಪನ್ನೀಡಲು

ತರಂಗದಲಿ ತಾವರೆಯಾದಂತೆ

ನಾನು ಬದಲಾಗಬೇಕಿದೆ!..

ಮರಳಿ ಬದುಕ ಬದುಕಬೇಕಿದೆ...

 

ಕೊನೆಗೊಮ್ಮೆ.. ಒಂದೊಮ್ಮೆ

ನಾನು ಬದಲಾಗಬೇಕಿದೆ

ನನ್ನೊಳಗೆ ನಾನು ಬದುಕ ಬೇಕಿದೆ..

-’ಮೌನರಾಗ’ ಶಮೀರ್ ನಂದಿಬೆಟ್ಟ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್