ಬದಲಾವಣೆಯ ಕಥೆ
ಬರಹ
ಇದು ಎ.ಎನ್.ಮೂತಿ೯ರಾಯರ "ಅಪರವಯಸ್ಕನ ಅಮೇರಿಕ ಯಾತ್ರೆ" ಪುಸ್ತಕದಲ್ಲಿರುವ ಒಂದು ಕಥೆ..
ಮೈಸೂರು ಮಹಾರಾಜರ ಕಾಲ.ಅರಮನೆಯಲ್ಲಿನ ಕೆಲಸದಾಳುಗಳು ಮಾತಾಡುವ ಗ್ರಾಮ್ಯ ಭಾಷೆ ಯುವರಾಜರಿಗೆ ಸರಿ ಕಾಣಲಿಲ್ಲ.ಅದು ಅರಮನೆಗೆ ಶೋಭೆಯಲ್ಲ ಅನ್ನಿಸಿತು ಅವರಿಗೆ.ಹಾಗಾಗಿ ಅವರು ಕುಕ್ಕೆ ಸುಬ್ರಮಣ್ಯ ಶಾಸ್ತ್ರಿಗಳು ಅಂತ ಒಬ್ಬ ಭಾಷಾ ಪಂಡಿತರನ್ನ ತಮ್ಮ ಕೆಲಸದಾಳುಗಳಿಗೆ ಶುದ್ಧ ಭಾಷೆ, ಉಚ್ಚಾರಣೆ ಹೇಳಿ ಕೊಡುವುದಕ್ಕೆ ನೇಮಿಸಿದರು. ಈ ನಡುವೆ ಯುವರಾಜರು ವಿದ್ಯಾಭ್ಯಾಸದ ಸಲುವಾಗಿ ಒಂದು ವಷ೯ ಇಂಗ್ಲೆಂಡಿಗೆ ಹೋಗಿ ಬಂದರು.ಬಂದ ಮಾರನೆಯ ದಿನ ಅವರು ತಮ್ಮ ಉದ್ಯಾನದಲ್ಲಿ ಅಡ್ಡಾಡುತಿದ್ದಾಗ ಒಬ್ಬ ತಲೆಗೆ ರುಮಾಲು ಬಿಗಿದು ಹೂ ಪಾತಿ ಸರಿ ಮಾಡುತಿದ್ದವ ಕಂಡ.ಯುವರಾಜರಿಗೆ ಅವನನ್ನು ಎಲ್ಲೋ ನೋಡಿದ ನೆನಪಾಯ್ತು. ಯುವರಾಜರು ಆ ಮನುಷ್ಯನನ್ನು "ಯಾರಯ್ಯ ನೀನು, ಎಲ್ಲೋ ನೋಡಿದ ಹಾಗಿದೆಯಲ್ಲ" ಎಂದು ಕೇಳಿದಾಗ ಆತ
"ಏನ ಬುದ್ಧಿ ನಾನು ಜ್ಯಪ್ತಿ ಇಲ್ವ...ನಾನು ಕುಕ್ಕೆ ಸುಬ್ಬ ಸೋಮಿ" ಎನ್ನಬೇಕೆ?!!!