ಬದಲಾವಣೆ ಯಾರಿಂದ ಸಾಧ್ಯ?

ಬದಲಾವಣೆ ಯಾರಿಂದ ಸಾಧ್ಯ?

ಬೆಳಿಗ್ಗೆ ಶಾಲೆಗೆ ತಲುಪಿˌ ನೋಟೀಸ್ ಬೋರ್ಡ್ ನಲ್ಲಿ ಹಾಕಿದ್ದ ವಾರ್ತೆ ನೋಡಿ ಆಶ್ಚರ್ಯವಾಯ್ತು.

"ಈ ಶಾಲೆಯಲ್ಲಿˌ ನಿಮ್ಮ ಏಳಿಗೆಯನ್ನು ಸಹಿಸದ, ನಿಮ್ಮ ಭವಿಷ್ಯವನ್ನು ಮೊಟಕುಗೊಳಿಸುವ, ನಿಮ್ಮ ಉನ್ನತಿಯನ್ನು ತಡೆಯುವಂತಹ ವ್ಯಕ್ತಿಯನ್ನು ಗುರುತಿಸಲಾಗಿದೆ. ಅವರ ಭಾವಚಿತ್ರವನ್ನು ಶಾಲೆಯ ಹಾಲ್ ನಲ್ಲಿ ಇರಿಸಲಾಗಿದೆ. ಒಬ್ಬೊಬ್ಬರೇ ಹೋಗಿ ಆ ವ್ಯಕ್ತಿಯ ಭಾವಚಿತ್ರವನ್ನು ನೋಡಿಕೊಂಡು ಬರಬೇಕೆಂದು ವಿನಂತಿ" ಎಂದು ಬರೆಯಲಾಗಿತ್ತು

ನಮ್ಮ ಉನ್ನತಿಯನ್ನು ತಡೆಯುವಂತಹ ನಮ್ಮ ನಡುವೇ ಇದ್ದ ಸಹಪಾಠಿಯೊಬ್ಬನ ಬಗ್ಗೆ ತಿಳಿಯುವ ಕುತೂಹಲ,ಹಂಬಲ ಎಲ್ಲರಿಗೂ ಇತ್ತುˌ

“ಅಬ್ಬಾ..ಏನೇ ಆಗಲೀˌ ನಮ್ಮ ಏಳಿಗೆಯನ್ನು ಸಹಿಸದ ವ್ಯಕ್ತಿಯನ್ನು ಗುರುತಿಸಿದ್ದು ಒಳ್ಳೇದಾಯಿತು"ಎಂದು ಎಲ್ಲರೂ ನಿಟ್ಟುಸಿರು ಬಿಟ್ಟರು.

ವಿದ್ಯಾರ್ಥಿಗಳೆಲ್ಲಾ ಒಬ್ಬೊಬ್ಬರಾಗಿ ಹಾಲ್ ನತ್ತ ತೆರಳಿದರುˌ ಹಾಲ್ ನಲ್ಲಿಟ್ಟಿದ್ದ ಫೋಟೋ ನೋಡಿˌ ಬೆವರನ್ನು ಒರೆಸುತ್ತಾ ಹಿಂದೆ ಬರುತ್ತಿದ್ದರು. ನೋಡಿದ ಪ್ರತಿಯೊಬ್ಬರಿಗೂ ಆಶ್ಚರ್ಯವಾಗಿತ್ತುˌ

ಯಾಕಂದರೆ,  ಆ ಹಾಲ್ ನಲ್ಲಿ ಯಾವುದೇ ಭಾವಚಿತ್ರವನ್ನು ಇರಿಸಿರಲಿಲ್ಲ. ಅಲ್ಲಿ ಇಟ್ಟದ್ದು ಒಂದು ದೊಡ್ಡದಾದ ‘ಕನ್ನಡಿ’ ಮಾತ್ರ. ಎಲ್ಲರೂ ಹಾಲ್ ಒಳಗೆ ಹೋಗಿ ಅವರವರ *ಪ್ರತಿಬಿಂಬ*ವನ್ನೇ ನೋಡುತ್ತಿದ್ದರು.

ಆ ಕನ್ನಡಿಯ ಹತ್ತಿರ ಇದ್ದ ಬೋರ್ಡ್ ನಲ್ಲಿ ಈ ರೀತಿ ಬರೆದಿತ್ತು

"ನಿಮ್ಮ ಉನ್ನತಿಯನ್ನು ತಡೆಯಲು ಒಬ್ಬ ವ್ಯಕ್ತಿಗೆ ಮಾತ್ರ ಸಾಧ್ಯವಾಗುವುದು....! ಆ ವ್ಯಕ್ತಿ ನೀವೇ ಆಗಿರುವಿರಿ...! ನಿಮ್ಮ ಸಂತೋಷವನ್ನೂ, ಸ್ವಾತಂತ್ರ್ಯವನ್ನೂ, ಕನಸನ್ನೂ ಸ್ವಾಧೀನಪಡಿಸಲು ಸಾಧ್ಯವಿರುವ ಏಕೈಕ ವ್ಯಕ್ತಿ ನೀವು ಮಾತ್ರ.....!

ನಿಮ್ಮ ಅಧ್ಯಾಪಕರ ಅಥವಾ ಉಪನ್ಯಾಸಕರ ಬದಲಾವಣೆಯಿಂದಲೋˌ ಗೆಳೆಯರು ಅಥವಾ ಶಾಲೆ ಬದಲಾವಣೆಯಿಂದಲೋˌನಿಮ್ಮ ಜೀವನ ಬದಲಾಗಲ್ಲˌˌ ನಿಮ್ಮ ಜೀವನ ಬದಲಾವಣೆಯಾಗಬೇಕಾದರೆˌ ನೀವು ಮೊದಲು ಬದಲಾಗಬೇಕು.

“ಅದು ನಿನ್ನಿಂದ ಪ್ರಾರಂಭವಾಗಲಿ

ಅದು ಇಂದೇ ಆರಂಭವಾಗಲಿ

ನಿನ್ನ ಜೀವನದ ಜವಾಬ್ಧಾರಿ ನೀನೇ ಎಂದು ತಿಳಿದುಕೋ

ದುಃಖದಿಂದˌ ಬೇಸರಗಳಿಂದ ಜೀವನ ಬದಲಾಗಲ್ಲˌ......!

ನಷ್ಟಗಳು ಮಾತ್ರ ಬರಲಿದೆ.”

ಒಂದು ಕೋಳಿಮೊಟ್ಟೆ ಹೊರಗಡೆಯ ಶಕ್ತಿಯಿಂದ ಒಡೆದರೆˌ ಒಂದು ಜೀವ ನಷ್ಟಹೊಂದುತ್ತದೆˌ ಒಳಗಡೆಯಿಂದ ಒಡೆದರೆ ಒಂದು ಜೀವಹೊರ ಬರುತ್ತದೆ.

“ನೀ ಬಯಸೋ ಬದಲಾವಣೆ; ಮೊದಲು ನಿನ್ನಿಂದಾಗಲಿ,

ಅದು ಇಂದಿನಿಂದಲೇ ಯಾಕೆ ? ಈಗಿನಿಂದಲೇ ಆಗಲಿ”

(ಸಂಗ್ರಹ)