ಬದುಕಿದ್ದರೆ ಎಂಭತ್ತು ವಸಂತಗಳನ್ನು ಪೂರೈಸಲಿದ್ದ ಶಮ್ಮಿ

ಬದುಕಿದ್ದರೆ ಎಂಭತ್ತು ವಸಂತಗಳನ್ನು ಪೂರೈಸಲಿದ್ದ ಶಮ್ಮಿ

    ಅಕ್ಟೋಬರ್ ೨೧ ಅನೇಕ ಐತಿಹಾಸಿಕ ಘಟನೆಗಳನ್ನು ತನ್ನ ಒಡಲಾಳದಲ್ಲಿ ಇರಿಸಿ ಕೊಂಡಿದೆ. ಈ ದಿನದಂದು ೧೭೭೨ ರಂದು ಇಂಗ್ಲೀಷ್ ಕವಿ ಸ್ಯಾಮೆವೆಲ್ ಕೊಲರಿಜ್ ಜನಿಸಿದರೆ, ೧೮೩೩ರಂದು ಸ್ವೀಡನ್ನಿನ ರಸಾಯನ ಶಾಸ್ತ್ರಜ್ಞ ಆಲ್ಫ್ರೆಡ್ ನೋಬೆಲ್ಲ ಜನಿಸಿದ. ೧೯೪೦ ರಂದು ಇಂಗ್ಲಂಡಿನ ಖ್ಯಾತ ಪ್ರಾರಂಭಿಕ ಬ್ಯಾಟ್ಸ್ಮಮನ್ ಜೆಫ್ರಿ ಬಾಯ್ಕಾಟ್  ಜನಿಸಿದರೆ , ಅದೆ ದಿನ ಇನ್ನೊಂದು ಪ್ರಖ್ಯಾತ ತಾರೆ ಉದಯ ವಾಯಿತು. ಆತ ಬೇರಾರೂ ಅಲ್ಲ ಬಾಲಿವುಡ್ನನ ಖ್ಯಾತ ನಟ ದಿ॥ ಶಮ್ಮಿಕಪೂರ. ಿಂದು ಆತ ಬದುಕಿದ್ದರೆ ಎಂಭತ್ತು ವಸಂತಗಳನ್ನು ಪೂರೈಸಲಿದ್ದ. ಈತ ಭಾರತದ ಖ್ಯಾತ ಕಪೂರ ವಂಶದ ಕುಡಿ. ಈತನ ತಂದೆ ಪೃಥ್ವಿ ಥಿಯೇಟರ್ಸನ ಮಾಲಿಕ ಟಾಕಿ ಯುಗ ಭಾರತ ಚಿತ್ರರಂಗದ ಪ್ರಥಮ ನಟ ಎಂಬೆಲ್ಬ ಹೆಗ್ಗಳಿಕೆಯನ್ನು ಹೊಂದಿದವ. ಅಣ್ಣ ಖ್ಯಾತನಟ ನಿರ್ಮಾಪಕ ನಿರ್ದೇಶಕ ಮತ್ತು ಆರ್್.ಕೆ.ಬ್ಯಾನರಿನ ಸಂಸ್ಥಾಪಕ ರಾಜಕಪೂರ. ಸಿನ್ನೊಬ್ಬ ತಮ್ಮ ಶಶಿಕಪೂರ ಸಹ ಹಿಮೀದ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ. ಹೌಸ್ ಹೋಲ್ಡರ್ ಹಾಗೂ ಸಿದ್ಧಾರ್ಥ ಹಾಲಿವುಡ್ ಚಿತ್ರಗಳಲ್ಲಿ ನಟಿಸಿದವ. 

     ಹಿರಿಯ ರಾಜಕಪೂರ ಮೆಟ್ರಿಕ್ಯಲೇಶನ್ ನಲ್ಲಿ ಡುಮ್ಕಿ ಹೊಡೆದು ಚಲನಚಿತ್ರದೆಡೆಗೆ ಮೋಹಗೊಂಡು ನಿರ್ದೇಶಕ ಕೇದಾರ ಶರ್ಮರ ಬಳಿ  ಸಹಾಯಕನಾಗಿ ವೃತ್ತಿಯನ್ನು ಪ್ರಾರಂಭಿಸಿ ನಟನೆಯ ಗೀಳು ಅಂಟಿಸಿಕೊಂಡು  ನಾಯಕನಟ ನಿರ್ಮಾಪಕ ನಿರ್ದೇಶಕನಾಗಿ ಬೆಳೆದ.  ಎರಡನೆಯವನಾದ ಶಮ್ಮಿಕಪೂರ ಸಹ ಹಿಂದಿ ಚಲನಚಿತ್ರ ರಂಗದ ಸೆಳೆತಕ್ಕೆ ಒಳಗಾದ. ತಂದೆ ಅಣ್ಣನ ಪ್ರಭಾವ ಬಳಸಿಕೊಳ್ಳದೆ ಶ್ರಮಪಟ್ಟು ವಿಫಲತೆಯಿಂದ ಸಫಲತೆಯೆಡೆಗೆ ಸಾಗಿದ. ಎತ್ತರದ ನಿಲುವು, ನೀಳ ಕಾಯ, ಜೊಂಪೆ ತಲೆಗೂದಲು ಗೌರವರ್ಣದ ಸುಂದರ ಮುಖದ ನೀಲ ಕಂಗಳ ಅಕರ್ಷಕ ನಟ. ಈತ ಹಾಲಿವುಡ್ ನಟನೇನೊ ಎನ್ನುವಷ್ಟು ಸ್ಪುರದ್ರೂಪಿಯಾಗಿದ್ದ. ಈತನ ಪ್ರಂಭಿಕ ಚಿತ್ರಗಳು ಯಶಸ್ಸು ಕಾಣಲಿಲ್ಲ,  ಅಂದರೆ ಬಾಕ್ಸಾಫೀಸಿನಲ್ಲಿ ಅಚ್ಟು ಹಣ ಮಾಡಲಿಲ್ಲ. ಹತಾಶನಾಗದೆ ಅವಕಾಶಕ್ಕಾಗಿ ಕಾದ ಯಶಸ್ವಿಯಾದ ಅಲ್ಲಿಯೆ ಬದುಕನ್ನು ಕಟ್ಟಿಕೊಂಡ. ' ದಿಲ್ ತೇರಾ ದೀವಾನ ' ಈತನ ಮೊದಲ ಯಶಸ್ವಿ ಚಿತ್ರ, ಿದರಲ್ಲಿ ಈತನ ಸಹನಟಿ ಮಾಲಾಸಿನ್ಹ. ನೀತರ ಒಂದೂವರೆ ದಶಕ  ಕಾಲ ಹಿಂದುರಿಗಿ ನೋಡಲಿಲ್ಲ. ಈತನ ದಾರಿ ಅಚ್ಟು ಸುಗಮವಾಗಿರಲಿಲ್ಲ, ನುರಿತ ಯಶಸ್ವಿ ನಾಯಕ ನಟರ ದಂಡೆಅಲ್ಲಿತ್ತು.ಹಿರಿಯರಾದ ಅಶೋಕಕುಮಾರ, ಬಲರಾಜಸಹಾನಿ,ಪ್ರದೀಪಕುಮಾರ,  ಖ್ಯಾತನಾಮರಾದ ದಿಲೀಪಕುಮಾರ, ರಾಜಕಪೂರ, ದೇವಆನಂದ, ರಾಜೇಂದ್ರಕುಮಾರ, ರಾಜಕುಮಾರ, ಸುನಿಲದತ್ತ, ಮನೋಜಕುಮಾರ, ಜಾಯ್ ಮುಖರ್ಜಿ, ಬಿಶ್ವಜೀತ ರಂತಹವರಿದ್ದರು. 

     ಶಮ್ಮಿಕಪೂರನ ಚಿತ್ರಗಳಲ್ಲಿ ಕಥೆಯ ೊಂದು ತೆಳು ಎಳೆ ಇರುತ್ತಿತ್ತು, ಸುಂದರ ಹೊರಾಂಗಣ ವರ್ಣವೈಭವ ಮನೋಲ್ಲಾಸ ಗೊಳಿಸುವ ಚಿತ್ರಗೀತೆಗಳುರಫಿಯ ಹಾಡುಗಾರಿಕೆ  ಸುಂದರ ನಟಿಯರು. ಯುವಕರಿಗೆ ಇನ್ನೇನು ಬೇಕು. ಅವುಗಳಲ್ಲಿಯೇ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಬಿಡುತ್ತಿದ್ದ. ಈತನ ಕೆಲ ಯಶಸ್ವಿ ಚಿತ್ರಗಳನ್ನು ಹೆಸರಿಸುವದಾದಲ್ಲಿ ಆಶಾಪಾರೇಖ ಜೊತೆಗಿನ ' ದಿಲ್ ತೆರಾ ದೀವಾನ ' ' ತೀಸ್ರಿ ಮಂಝಿಲ್ ', ಕಲ್ಪನಾಳ ಜೊತೆಗಿನ ' ಪ್ರೊಫೆಸರ್ ', ರಾಜಶ್ರೀ ಜೊತೆಗ್ಇನ ' ಜಾನವರ್್ ' ' ಬ್ರಹ್ಮಚಾರಿ ', ನೂತನ ಜೊತೆಗಿನ ' ಲಾಟ್ ಸಾಹೇಬ್ ' , ಶರ್ಮಿಳಾ ಜೊತೆಗಿನ ' ಕಾಶ್ಮೀರ ಕಿ ಕಲಿ ' '  ಯೆನ್ ಇವನಿಂಗ್ ಇನ್ ಪ್ಯಾರಿಸ್', ವೈಜಯಂತಿಮಾಲ ಜೊತೆಗಿನ ' ಪ್ರಿನ್ಸ್',  ಸಾಧನಾ ಜೊತೆಗಿನ ' ರಾಜಕುಮಾರ' ' ಬತ್ತಮೀಜ್' ಗಳನ್ನು ಹೆಸರಿಸದಬಹುದು ಈತ ತನ್ನ ಬ್ರಹ್ಮಚಾರಿ ಚಿತ್ರದ ಅಭಿನಯಕ್ಕೆ ಫಿಲಂಫೇರ್ ಅವಾರ್ಡ ಪಡೆದ. 

     ರಾಜೇಶಖನ್ನ, ನವೀನ್ ನಿಶ್ಚಲ್, ಸಂಜಯ, ವಿನೋದ ಮೆಹ್ರಾ, ರಾಕೇಶ ರೋಶನ್, ಅಮಿತಾಬ ಬಚ್ಚನ್ ರಂ<ತಹ ಹೊಸಬರ ಆಗಮನವಾದಾಗ ಗೌರವಯುತವಾಗಿ ನಾಯಕನ ನಟನೆಯಿಂದ ಹಿಂದೆ ಸರಿದ.  ಚಾರಿತ್ರಿಕ ಪೋಚಕ ಪಾತ್ರಗಳಲ್ಲಿ ಅಭಿನಯಿಸಿದ. ರಾಜಕಪೂರ ' ಸಂಗಮ' ನಂತಹ ಯಶಸ್ವಿ ಚಿತ್ರ ದ ನಂತರ ಕೆಲ ಚಿತ್ರಗಳನ್ನು ಘೋಷಿಸಿದ. ಅವುಗಳ ಪೈಕಿ ' ಮೇರಾ ನಾಮ ಜೋಕರ್ ' ಮತ್ತು ' ಅಜಂತ ' ಕೂಡ ಇದ್ದವು, 'ಅಜಂತ'ದಲ್ಲಿ ಶಮ್ಮಿಕಪೂರ ಜೊತೆಗೆ ಇಟಾಲಿಯನ್ ಮೂಲದ ಖ್ಯಾತ ಹಾಲಿವುಡ್ ನಟಿ 'ಸೋಫಿಯಾ ಲಾರನ್ 'ಳನ್ನು ಹಾಕಿಕೊಂಡು ಹಿಂದಿ ಮತ್ತು ಇಂಗ್ಳಿಷ್ ನಲ್ಲಿ ಚಿತ್ರ ತೆಗೆಯು ಯೋಚನೆಯಿತ್ತು, ಆದರೆ ಮೊದಲು ಜೋಕರ ಚಿತ್ರ ಕೈಗೆತ್ತಿಕೊಂಡ, ಅದರ ತಯಾರಿಕಗೆ ಧೀರ್ಘಕಾಲ ಹಿಡಿಯಿತು, ಚಿತ್ರ ಸೋತಿತು ಅಜಂತ ಪ್ರೊಜೆಕ್ಟ್ ಹಾಗೆಯೆ ಉಳಿಯಿತು, ರಾಜಕಪೂರ ಬ್ಯಾನರಿನಲ್ಲಿ ಆತನಿಗೆ ಅಭಿನಯಿಸಲು ಆಗಲೆ ಇಲ್ಲ. 

    ಈತ ತನ್ನ ಯೌವನದ ಕಾಲದಲ್ಲಿ 'ಮಧುಬಾಲ'ಳನ್ನು ಮದುವೆಯಾಗುವ ಹುಚ್ಚು ಹಿಡಿಸಿಕೊಂಡಿದ್ದ. ಮನೆಯಲ್ಲಿ ಹಿರಿಯರ್ಉ ಒಪ್ಪದ ಕಾರಣ ನಿರಾಶೆ ಅನುಭವಿಸಿದ. ನಂತರ ಆ ಕಾಲದ ಖ್ಯಾತ ನಟಿ ' ಗೀತಾಬಾಲಿ'ಯನ್ನು ಮದುವೆಯಾ. ಕೆಲ ವರ್ಷಗಳ ನಂತರ ಕಾಯಿಲೆ ಯಿಂದ ಾಕೆ ಮರಣ ಹೊಂದಿದಳು. ನಂತರ ರಾಜ ಮನೆತನದ ನೀಳಾದೇವಿಯನ್ನು ಮದುವೆಯಾದ. ಾತ ತನ್ನ ಿದ್ದೊಬ್ಬ ಮಗನನ್ನು ಚಿತ್ರ ರಂಗಕ್ಕೆ ತರಲಿಲ್ಲ. ಆತ ಅಮೇರಿಕಾದಲ್ಲಿ ಇಂಜನೀಯರ ಆಗಿದ್ದಾನೆ. ಹಿಂದಿ ಚಿತ್ರ ರಂಗವೊಂದು ಮಹಾಸಾಗರ. ಅನೇಕ ಝರಿ ತೊರೆ ಹೊಳೆ ಹಳ್ಳ ನದಿಗಳು ಇದರಲ್ಲಿ ಐಕ್ಯವಾಗಿವೆ. ಅದೇ ರೀತಿ ಶಮ್ಮಿಕಪೂರ ಎಂಬ ತೊರೆ ಹುಟ್ಟಿ ಹರಿದು ನದಿಯಾಗಿ ಬೆಳೆದು ಹರಿದು ಮುದಗೋಮಡು ಮುದಗೊಳಿಸಿ ಪ್ರಮುಖ ವಾಹಿನಿಯಲ್ಲಿ ಐಕ್ಯವಾಗಿದೆ. ಆತನ ಹುಟ್ಟು ಹಬ್ಬದ ಈ ದಿನದಂದು ಆತನನ್ನು ಸ್ಮರಿಸಿ ನೆನಪಿಸಿಕೊಳ್ಳೋಣ. ಾತನ ನೆನಪಿಗೆ ಆತ ಬವಿಟ್ಟು ಹೋದ ಚಲನಚಿತ್ರಗಳಿವೆ ಸುಮಧುರ ಗೀತೆಗಳಿವೆ, ನೋಡೋಣ ಕೇಳೋಣ ಅನಂದಿಸೋಣ.

ಚಿತ್ರ ಕೃಪೆಃ bollyspice.com

Comments