ಬದುಕಿನ ಬಂಡಿ
ಕವನ
ಮನತುಂಬಿದಾಗ ಹೃದಯದ ಮಾತು
ತನುವರಳಿದಾಗ ಹೊಸತನದ ಹುರುಪು
ಜೀವನಕೆ ಮುಖ್ಯ ವಾಹಕವೇ ಪ್ರೀತಿಯು
ಪ್ರೇಮದೊಂದಿಗೆ ಸಮ್ಮಿಲನ ಹರುಷವು
ಹೃದಯಗೀತೆಯ ಬೆಳಕೆ ಎಲ್ಲೆಲ್ಲೂ ಬರಲೆಂದು
ಔದಾರ್ಯ ಚೆಲುವುಗಳು ಮೀರಿ ಹಬ್ಬಲೆಂದು
ಚಿಂತೆಯಿಲ್ಲದೆ ಮೋಹವದು ಪಯಣಿಸಲು
ಬಾಂಧವ್ಯ ಜೊತೆಯಾಗಿ ಸಾಗಲೆಂದು
ವನದೊಳಗೆ ಪುಷ್ಪವು ಪರಿಮಳವ ಸೂಸಲು
ಸಂಸಾರ ಸಾಗರದಿ ಈಜೋಣವೆಂದು
ಚೈತನ್ಯ ಬಲುಮೆಯಲಿ ಗೆಲುವೆಲ್ಲ ಸೇರಿರಲು
ಭಾವನೆಯ ಸಂಗದೊಳು ಮೋಹಕವುಯೆಂದು
ಬಾಳುತಿರೆ ಭವದೊಳಗೆ ಸಂಸಾರ ಸಾಗರವು
ಹೀಗೆ ಪಯಣಿಸುತಲಿರಲಿ ನಮ್ಮಿಬ್ಬರಾ ಒಲವು
ಕನಸುಗಳ ಬಾಳಿನಲಿ ನನಸೆಲ್ಲ ತುಂಬಿರಲು
ಮುಂದೆ ಬದುಕಿನ ಬಂಡಿ ಸವಿಯೆಲ್ಲವು
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್