ಬದುಕಿನ ವಪ್ಪಿ

ಬದುಕಿನ ವಪ್ಪಿ

ಕವನ

ಬದುಕಿಲಿ ವಪ್ಪಕೆ ಇಂಪ್ಪ ಒಟ್ಟಿಂಗೆ ಹೀಂಗೆಯೇ ಇಂಪ್ಪ ಅಲ್ಲದ ಕೂಸೆ

ಚೈತ್ರಲ್ಲಿ ಪ್ರೇಮದ ಒರತೆ ಹರಿದು ಹೋಗಲಿ ನದಿಯ ಹಾಂಗೆ

ಅಬ್ಬೆ ಕನಸಿಲಿಯೇ ಬಂದಿಕ್ಕಿ ಹೇಳಿದ್ದು ಕೂಡ ಎನಗೆ ಪ್ರೀತಿ

ಬೇರೆಯವರ ಹಾಂಗೆ ಅದು ಬೇಕು ಹೇಳಲೇ , ಎಂಗೊಗಿಲ್ಲೆ ಆಸೆ

ಉದಿಯಪ್ಪಗಳೇ ಎದ್ದಿಕ್ಕಿ ಹಾಲು ಕರವಲೆ ಹೋಪದು ಖುಷಿ

ತೋಟಕ್ಕೆ ಹೋದರೆ ,ಬಿದ್ದ ಅಡಕ್ಕೆ ಹೆರ್ಕಿಕ್ಕಿ ಚಿಳ್ಳಿ ಹಿಡಿವಲಾತು

ಬಜಕ್ಕರೆಯ ಗೋಣಿಲಿ ತುಂಬುಸ್ಯೊಂಡು ಹಟ್ಟಿಗೆ ತಂದೇ ಸಾಕಾತು

ಹೆಂಡತಿಯ ಚಾಯ ಬಪ್ಪಾಗ ಕೆಲಸ ಆಗದ್ದರೆ ಮಂಡೇ ಬಿಸಿ

ಸುಮ್ಮನೇ ತಲೆ ಬಿಸಿಯ ಮಾಡಲಾಗ ಹೇಳಿರೆ ಕೇಳೆಕ್ಕು ಹಾಂಗೆ

ಜಾತಕಲ್ಲಿ ಬರೆದಾಂಗೆ ಅಕ್ಕು ಹೇಳಿ ಕೂದರಕ್ಕ ಮನೆ ಹೆರ

ಹಪ್ಪಳ ತಿಂದಿಕ್ಕಿ ಮೊಸರನ್ನ ತಿಂದಿದೆ ಹೇಳಿ ಮನಸು ಬಾರ

ಹೊಂದಾಣಿಕೆಲಿ ಸಂಸಾರ ಸಾಗಿದರೆ ಸುಖವಾಗಿ ಇಕ್ಕು ಹೀಂಗೆ

ಅಪ್ಪುಗೆಯ ಒಪ್ಪಿಗೆಲಿ ಯಾವತ್ತೂ ಮನೆಯೊಳವೇ ಮಾತಾಡುಂವ

ಜೀವನದ ದಾರೀಲಿ ಹೀಂಗೆಯೇ ಕೈಹಿಡುಕೊಂಡೇ ನಡೆದಾಡುಂವ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್