ಬದುಕು ಇನ್ಸಿಡೆಂಟು!

ಬದುಕು ಇನ್ಸಿಡೆಂಟು!

ಬರಹ

ಈ ಜಗಕೆ ಬರುವುದೊಂದು ಇನ್ಸಿಡೆಂಟು
ಕಣ್ಣಿನಿಂದ ಮರೆಯಾಗುವುದೊಂದು ಆಕ್ಸಿಡೆಂಟು
ಎಲ್ಲ ಜೀವಿಗಳಲೂ ಇದು ಪ್ರಿವಲೆಂಟು
ನಾ ತೋರಿಸಬಲ್ಲೆನು ಪ್ರಿಸಿಡೆಂಟು

ಅದೃಷ್ಟವಿದ್ದರೆ ನಾನಾಗುವೆ ಪ್ರೆಸಿಡೆಂಟು
ನತದೃಷ್ಟನಾದೊಡೆ ಚಿಂತೆಗಳು ನೂರೆಂಟು
ಬ್ರಹ್ಮ ಹಾಕಿದ ಗಂಟು ನನ್ನಲ್ಲುಂಟು
ಈ ಗಂಟಾಗಲಿ ಬಿಡಿಸಲಾರದಂತಹ ನಂಟು

ಜೀವನದಲಿ ಮಾಡುವುದೆಲ್ಲವೂ ಎಕ್ಸ್‍ಪೆರಿಮೆಂಟು
ನನಗ್ಯಾವುದೂ ಅಲ್ಲ ಇಂಪಾರ್ಟೆಂಟು
ಸಿದ್ಧವಾಗಿಲ್ಲ ಯಾವುದೂ ಪರ್ಮನೆಂಟು (ಸಿದ್ಧ = ಕನ್‍ಫರ್ಮ್)
ಕನಸೆಲ್ಲವನೂ ನನಸೆಂದು ಕಾಣುವುದುಂಟು

ನಾನೂ ಕಂಡಿದ್ದೆ ವಯಸ್ಸು ಹದಿನೆಂಟು
ಮೇಲಾಗಿ ಮುಗಿಸಿಹೆನು ಇನ್ನೂ ಇಪ್ಪತ್ತೆಂಟು
ಆಗಿಹೆನು ವಾರಸುದಾರನಿಲ್ಲದ ಬಲಿತ ದಂಟು
ಒಮ್ಮೊಮ್ಮೆ ಕೊರಡೂ ಚಿಗುರುವುದುಂಟು

ನನ್ನ ನಂಬಿಹ ಜೀವ ನಡೆಸುತಿಹ ಜೀವಿಗಳೆಂಟು
ಅವರಿಗೆ ನನ್ನ ಮೇಲೆ ಬಲವಾದ ನಂಬಿಕೆಯುಂಟು
ಅವರ ನಂಬಿಕೆ ಹುಸಿಮಾಡಲು ಯತ್ನಿಸಿದ್ದುಂಟು
ನಾನಿಲ್ಲದೆಯೂ ಬದುಕಲು ಅವರಿಗೆ ಗೊತ್ತುಂಟು

ಇದ ಅರಿತು ಬಾಳು ನಡೆಸಲು ಸುಖವುಂಟು
ಇಲ್ಲವಾದಲ್ಲಿ ಸುಲಭದಲಿ ಹಾಳಾಗುವುದುಂಟು