ಬದುಕು ಎಂದರೇನು?

ಈ ಜಗತ್ತಿನ ಗಣ್ಯರ ಅಭಿಪ್ರಾಯದಂತೆ ಒಬ್ಬೊಬ್ಬರದು ಒಂದೊಂದು ರೀತಿ:
ಬುದ್ಧ ಹೇಳುತ್ತಾನೆ, *"ಪ್ರೀತಿ ಮತ್ತು ಶಾಂತಿ".*
ದುರ್ಯೋಧನ ಹೇಳುತ್ತಾನೆ, *"ಹಠ ಮತ್ತು ಛಲ".*
ಏಕಲವ್ಯ ಹೇಳುತ್ತಾನೆ, *"ಗುರಿ".
ಯುಧಿಷ್ಠಿರ ಹೇಳುತ್ತಾನೆ, *"ಧರ್ಮ"*
ಶ್ರೀ ಕೃಷ್ಣ ಹೇಳುತ್ತಾನೆ, *"ಸಮದರ್ಶಿತ್ವ".*
ಭೀಷ್ಮ ಹೇಳುತ್ತಾನೆ, *"ಪ್ರತಿಜ್ಞೆ".*
ಒಬ್ಬ ಸಂತ ಹೇಳುತ್ತಾನೆ, *"ಭಕ್ತಿ".*
ಒಬ್ಬ ಸನ್ಯಾಸಿ ಹೇಳುತ್ತಾನೆ, *"ವೈರಾಗ್ಯ".*
ಅಲೆಕ್ಸಾಂಡರ್ ಹೇಳುತ್ತಾನೆ, *"ಯುದ್ಧ".*
ಶ್ರೀಮಂತ ಹೇಳುತ್ತಾನೆ, *"ಮೋಜು ಮತ್ತು ಮಸ್ತಿ".*
ಮಧ್ಯಮ ವರ್ಗದವನು ಹೇಳುತ್ತಾನೆ, *"ಉದ್ಯೋಗ".*
ಹಸಿದವನು ಹೇಳುತ್ತಾನೆ, *"ತನ್ನ ಪಾಲಿನ ಅರ್ಧ ರೊಟ್ಟಿ".*
ಹೀಗೆ ಒಬ್ಬೊಬರಿಗೆ ಒಂದೊಂದು ರೀತಿ ಬದುಕು ಕಾಣುತ್ತದೆ.
ಅವರವರ ಆಲೋಚನೆಯಂತೆ ಅವರವರು ಬದುಕನ್ನು ಸಮರ್ಥಿಸುತ್ತಾರೆ.
ಬದುಕೆನ್ನುವುದು ಸುಂದರವಾದ ಅನುಭವ. ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ ಎಲ್ಲವೂ ಅಮೂಲ್ಯ. ಈ ಯಾವುದೂ ಹಿಂತಿರುಗಿ ಬರುವುದಿಲ್ಲ. ಒಮ್ಮೆ ಕಳೆದರೆ ಮುಗಿಯಿತು. ಆದ್ದರಿಂದಲೇ ಪ್ರತಿ ಕ್ಷಣದ ಬದುಕು ನವ ನವೀನ. ಹೀಗೆಯೇ ನಮ್ಮ ಬದುಕು ಅನಿಶ್ಚಿತ ಕೂಡಾ. ಮುಂದಿನ ಕ್ಷಣ ಏನೆಂದು ಯಾರಿಗೂ ತಿಳಿಯದು. ಈ ಕ್ಷಣವೇ ಪರಮ ಪವಿತ್ರ. ಈ ಕ್ಷಣವನ್ನು ಸಂಪೂರ್ಣ ಅನುಭವಿಸುವುದೇ ಬದುಕು. ಸಂಘರ್ಷ, ಮನಸ್ತಾಪ, ಕೋಪ, ದ್ವೇಷ ಇವುಗಳನ್ನು ಕಡಿಮೆ ಮಾಡುತ್ತಾ ಪ್ರೀತಿ, ಸೌಹಾರ್ದ, ಸಹಾಯ, ಕಾರುಣ್ಯ, ಮತ್ತು ಹಸನ್ಮುಖದ ನಡುವೆ ಬದುಕುವುದೇ ಸಾರ್ಥಕ ಜೀವನ. ನಮ್ಮ ಚಿಂತನೆ ಸಕಾರಾತ್ಮಕವಾಗಿದ್ದರೆ ಆ ಕ್ಷಣದಲ್ಲಿ ಒಂದಷ್ಟು ಚೈತನ್ಯ ಮೂಡುತ್ತದೆ. ಇಲ್ಲವಾದರೆ ನಿರಾಸೆ ನಮ್ಮದಾಗುತ್ತದೆ.
ಕಷ್ಟ, ನೋವು, ನಿರಾಸೆ, ದುಃಖ ಎಲ್ಲವು ಎಲ್ಲರಿಗೂ ಇದೆ. ಆದರೆ, ಅವುಗಳ ಮಧ್ಯೆ ಸಂತೋಷದಿಂದ , ತೃಪ್ತಿಯಿಂದ ಬದುಕುವುದೇ ಜೀವನ...!
*ಮುಗುಳ್ನಗುತ್ತಿರಿ. ನಿಮ್ಮ ನರಗಳು ಸಡಿಲಗೊಳ್ಳುತ್ತವೆ.*
*ಪ್ರಾರ್ಥಿಸುತ್ತಿರಿ. ನಿಮ್ಮ 'ಭಾರ'ಗಳು ಕಡಿಮೆಯಾಗುತ್ತವೆ*
*ಜೋರಾಗಿ ನಕ್ಕುಬಿಡಿ. ನಿಮ್ಮ ಹೃದಯ ಹಗುರಾಗುತ್ತದೆ.*
*ಕ್ಷಮಿಸಿಬಿಡಿ. ಕೋಪ, ದ್ವೇಷಗಳು ಕಡಿಮೆಯಾಗುತ್ತದೆ*
ಒಳ್ಳೆಯ ಬದುಕಿನ ಸಂಗಾತಿಗಳಿವು. ಇವುಗಳನ್ನು ಎಂದಿಗೂ ಬಿಟ್ಟು ಬದುಕಬೇಡಿ.
(ಸಂಗ್ರಹ)