ಬದುಕು ಒಂದು ಹಳೆಯ ಫೋಟೋ ಆಲ್ಬಮ್ ( ಕವನ )
ಕವನ
ಬದುಕು
ಒಂದು ಹಳೆಯ ಫೋಟೊ ಆಲ್ಬಮ್
ಮುಖಕೆ ರಾಚುವ ಚಿತ್ರಗಳು
ಬೇಕಾದವು ಬೇಡವಾದವು
ಗಮನಿಸಿ ನೋಡಿದರೆ ಮಾತ್ರ
ಗೋಚರವಾಗುವ ಹಲವು
ಹತ್ತರೊಳಗೊಂದು ಎಂಬಂತೆ
ಗಮನಕ್ಕೆ ಬಾರದೇ ಹೋಗುವ ಇನ್ನೂ ಕೆಲವು
ಸಣ್ಣವರು ದೊಡ್ಡವರು ಮನಕೆ
ಮುದ ನೀಡಿದವರು ನೀಡದವರು
ನಯವಂಚಕರು ಅಸೂಯಾಪರರು
ನಿಷ್ಟುರಿ ಹಿತಚಿಂತಕರು
ಮುಂದೆ ಬೆಲ್ಲದಂತಹ ಮಾತಾಡಿ
ಹಿಂದೆ ತೆಗಳಿ ಹೊಟ್ಟೆಯುರಿಸಿ ಕೊಂಡವರು
ಅನೇಕ ಚಿತ್ರಗಳ ಸಂಬಂಧ
ಎಂದೋ ಕಳಚಿ ಕೊಂಡಿರುತ್ತವೆ
ಕೆಲವು ಮಾತ್ರ ಮನದಾಳದ ಮೂಲೆಯಲಿ
ಹುದುಗಿ ಕಡೆಗಣಿಸಲ್ಪಟ್ಟಿರುತ್ತವೆ
ಬೇಡದ ಸಂಬಂಧಗಳ ಮೆರವಣಿಗೆಯಲ್ಲಿ
ಆದರೆ ಸ್ಥಿರವಾಗಿ ನೆಲೆಯೂರಿರುತ್ತವೆ
ಮನದಂತರಾಳದ ಯಾವುದೋ ಮೂಲೆಯಲ್ಲಿ
ಅವು ತಮ್ಮ ಇರುವಿಕೆ ತೋರಲು
ಶುಷ್ಕ ಮೆರವಣಿಗೆ ಹೊರಡುವುದಿಲ್ಲ
ಬದುಕು ಕಷ್ಟ ಕಾರ್ಪಣ್ಯಗಳ ಸುಳಿಗೆ ಸಿಕ್ಕಾಗ
ಜೀವನದ ಬಗ್ಗೆ ಭ್ರಮ ನಿರಸನವಾದಾಗ
ಧುತ್ತೆಂದು ಕಣ್ಮುಂದೆ ಬಂದು ನಿಲ್ಲುತ್ತವೆ
ಸಾಂತ್ವನ ನೀಡುತ್ತವೆ ಊರುಗೋಲಾಗುತ್ತವೆ
ಜೀವನದ ಅರ್ಥ ಮಾಡಿಸುತ್ತವೆ
ಭವ ಸಾಗರ ದಾಟಿಸುವ
ಹಾಯಿ ಡೋಣಿಗಳಾಗುತ್ತವೆ
Comments
ಉ: ಬದುಕು ಒಂದು ಹಳೆಯ ಫೋಟೋ ಆಲ್ಬಮ್ ( ಕವನ )
In reply to ಉ: ಬದುಕು ಒಂದು ಹಳೆಯ ಫೋಟೋ ಆಲ್ಬಮ್ ( ಕವನ ) by swara kamath
ಉ: ಬದುಕು ಒಂದು ಹಳೆಯ ಫೋಟೋ ಆಲ್ಬಮ್ ( ಕವನ )