ಬದುಕು ನಲುಗಿದೆ ದೇಹವು ನಡುಗಿದೆ

ಬದುಕು ನಲುಗಿದೆ ದೇಹವು ನಡುಗಿದೆ

ಬರಹ

ಬದುಕು ನಲುಗಿದೆ ದೇಹವು ನಡುಗಿದೆ

ಜಗವು ತುಂಬಿದೆ ನೀರಿನಿಂದ ಮನವು ತುಂಬಿದೆ ಕಣ್ಣೀರಿನಿಂದ
ಕನಸು ಕೊನರಿದೆ ಮನಸು ಮುದುಡಿದೆ

ಸುತ್ತಲು ನೀರುಂಟು ಕುಡಿಯಲು ವಿಷವುಂಟು
ಆದರೆ ನನ್ನೇ ನಂಬಿದ ಜೀವಗಳಿವೆ
ನಂಬಿದ ಜೀವಗಳಿಗೆ ದೇಹದ ನಂಟಿದೆ

ಹಸಿದ ಹೊಟ್ಟೆಯು ಹಸಿವಿನಿಂದ ತುಂಬಿದೆ
ಉಟ್ಟ ಬಟ್ಟೆಯು ನೀರಲ್ಲೇ ಕೊಳೆತಿದೆ
ಇರಲು ಸೂರಿಲ್ಲ ಕೈಯಲ್ಲಿ ಕಾಸಿಲ್ಲ

ಉಲ್ಭಣಿಸಿವೆ ಮಾರಕ ರೋಗಗಳು
ಧರಶಾಯಿಯಾಗಿವೆ ಬೇಳೆ ಮನೆಗಳು
ಸಿರಿಮಗನಿಗೆ ಹೇಗೆ ಕಂಡಿತು ಬಡವರ ನೀರಿನಾಟ
ದೇವರ ಮುಂದೆ ನಡೆದಿತೇ ಅವನ ಸಿರಿಯಾಟ

ಪರಿಹಾರದ ಮಾತಿಲ್ಲ ಭರವಸೆಯ ಸೊಂಕಿಲ್ಲ
ಪ್ರವಾಹವು ಬಂದುಹೋಗಿದೆ
ಪರಿಹಾರವೆಂಬ ಭರವಸೆಯ ಪ್ರವಾಹವು ಬಂದುಹೋಗಿದೆ

ಮತ್ತೇ ಬರುತ್ತೆ ಮುಂದಿನ ಪ್ರವಾಹ
ಮತ್ತೇ ಬರುತ್ತೆ ಭರವಸೆಯ ಪ್ರವಾಹ

ಮೇಲಿನ ಚಿತ್ರವನ್ನು ನೋಡಿ ರಚಿಸಿದ್ದು