ಬದುಕು ಬದುಕಲ್ಲ

ಬದುಕು ಬದುಕಲ್ಲ

ಕವನ

ಬದುಕು ಬದುಕಲ್ಲವಿದು

ಪ್ರೀತಿಯ ಹೊಂಬೆಳಕು

ಸಾಗಿದೊಡೆ ಪ್ರೇಮವದು ತಿಳಿವುದೈ ಒಲವು

ಕರ್ಮಗಳ ಕಾಲಗಳು 

ಸವಿಯಾಗಿ ಸಾಗಿಹವು

ಬರದಿರಲು ಆತುರವು ತಬ್ಬಿಕೊಂಡಿಹವು

 

ಭಾವನೆಯ ತೀರದೊಳು

ಅರಿತಿರುವ ಹೃದಯಗಳು

ಜೀವನದ ಪಯಣದೊಳು ಸೇರಿ ಬಾಳಿಹವು 

ನಲುಮೆ ಒಲುಮೆಗಳಿರಲು

ಒಡಲು ಹಾಡುತಲಿಹುದು

ಸವಿಯಾದ ತನುವೊಳಗು ಸುಖವಾಗಿ ಇಹವು

 

ತಂಪಿರುವ ಮನೆಗಳಿಗು

ಕೆಂಪಿರುವೆ ಸಾಗಿಹುದು

ಎಚ್ಚರದ ಬದುಕೊಳಗೆ ಬರಿದೆ ಕನಸುಗಳು

ಸೋತಿರುವ ಮೌನಗಳು

ಬಿರಿದು ಅಬ್ಬರಿಸುತಿರಲು

ಹೊಗೆ ಕಾಣದಿರಲಿಂದು ಬರಲಿ ನನಸುಗಳು

 

ಹಾ ಮ ಸತೀಶ ಬೆಂಗಳೂರು

ಚಿತ್ರ್