ಬದುಕು ಬದುಕಲ್ಲವಿದು
ಕವನ
ಬದುಕು ಬದುಕಲ್ಲವಿದು
ಪ್ರೀತಿಯ ಹೊಂಬೆಳಕು
ಸಾಗಿದೊಡೆ ತಿಳಿವುದೆ ಅದರೊಲವುಯೇನು
ಕರ್ಮಗಳ ಕಾಲವದು
ಸವಿಯಾಗಿ ಸಾಗಿಹವು
ಬರದಿರಲು ಆತುರವು ತಬ್ಬಿಕೊಂಡಿಹುದೇನು
ಭಾವನೆಯ ತೀರದೊಳು
ಅರಿತಿರುವ ಹೃದಯಗಳು
ಜೀವನದ ಪಯಣದೊಳು ಸೇರಿ ಬಾಳಿಹವೇನು
ನಲುಮೆ ಒಲುಮೆಗಳಿರಲು
ಒಡಲು ಹಾಡುತಲಿಹುದು
ಸವಿಯಾದ ತನುವೊಳಗು ಸುಖವಾಗಿಹವೇನು
ತಂಪಿರುವ ಮನೆಗಳಿಗು
ಕೆಂಪಿರುವೆ ಸಾಗಿಹುದು
ಎಚ್ಚರಿಕೆ ಬದುಕೊಳಗೆ ಬರಿದೆ ಕನಸಿದೆಯೇನು
ಸೋತಿರುವ ಮೌನಗಳು
ಬಿರಿದು ಅಬ್ಬರಿಸುತಿರಲು
ಹೊಗೆಯಾಗುತ ಹೀಗೆ ಸನಿಹ ನನಸಿದೆಯೇನು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ; ಇಂಟರ್ನೆಟ್ ತಾಣ
ಚಿತ್ರ್