ಬದುಕೆಂದರೇ ಹೀಗೆಯೇ!
ಕವನ
ಬದುಕೆಂದರೇ ಹೀಗೆಯೇ
ಏಳುಬೀಳಿನ ಪಯಣ.
ದಾರಿ ತುಂಬ ಕಲ್ಲುಮುಳ್ಳು,
ಅಲ್ಲಲ್ಲಿ ಕಾಣಬಹುದು ಹೂವಹಾದಿ.
ಬದುಕೆಂದರೇ ಹೀಗೆಯೇ ಗುರಿಯಿಲ್ಲದೇ ಚಲಿಸೋ ನದಿ.
ತಗ್ಗು ಸಿಗಲು ಹರಿಯುವುದು,
ಗುಂಡಿ ಬರಲು ಜಲಪಾತವಾಗುವುದು.
ಬದುಕೆಂದರೇ ಹೀಗೆಯೇ
ಅದು ಮುಗಿಲಿನಿಂದ ಬಿದ್ದ ಹನಿ.
ಗೊಬ್ಬರಗುಂಡಿಗೆ ಬಿದ್ದು ಇಂಗಿಹೋಗಬಹುದು,
ಕಡಲಾಳದ ಚಿಪ್ಪಸೇರಿ ಮುತ್ತಾಗಲೂಬಹುದು.
ಬದುಕೆಂದರೇ ಹೀಗೆಯೇ
ಉದ್ಯಾನದಿ ಬೆಳೆದ ಹೂವು.
ದೇವರಪಾದವ ಸೋಕಿ ಜೀವನ ಪಾವನವಾಗಬಹುದು,
ಪಾಪಿ ಹೆಣದ ಮೇಲೆಬಿದ್ದು ಬಾಡಿಹೋಗಲೂಬಹುದು.
ಬದುಕೆಂದರೇ ಹೀಗೆಯೇ ಕತ್ತಲೆಯ ಪಯಣ,
ಸ್ವಲ್ಪ ಕಾದರೇ ಗೋಚರಿಸಬಹುದು ಬೆಳಕಿನ ಕಿಡಿ.
ಬದುಕೇಂದರೇ ಹೀಗೆಯೇ ಕಷ್ಟ ಸುಖದ ಸಂತೇ.
ಬೇವು ಬೆಲ್ಲದಂತೇ ಎರಡು ಕೂಡ ಇರುವುದು.
Comments
ಉ: ಬದುಕೆಂದರೇ ಹೀಗೆಯೇ!
In reply to ಉ: ಬದುಕೆಂದರೇ ಹೀಗೆಯೇ! by Saranga
ಉ: ಬದುಕೆಂದರೇ ಹೀಗೆಯೇ!
ಉ: ಬದುಕೆಂದರೇ ಹೀಗೆಯೇ!
In reply to ಉ: ಬದುಕೆಂದರೇ ಹೀಗೆಯೇ! by ಭಾಗ್ವತ
ಉ: ಬದುಕೆಂದರೇ ಹೀಗೆಯೇ!