ಬದುಕೊಂದು ಜೀವಂತ ಕವನ

ಬದುಕೊಂದು ಜೀವಂತ ಕವನ

ಕವನ

ನನ್ನವಳ ಮನದಳಲು
ಮುಖದ ಮೇಲ್ ಕಂಡಾಗ
ಮೂಡಿ ಬಂದಿತ್ತು
ನನ್ನ ಮೊದಲ ಕವನ|| 

ಹಸಿದ ಹೊಟ್ಟೆಗೆ
ರೊಟ್ಟಿ ಸಿಗದ ದಿನಗಳ
ನೆನಪಿನಲಿ ನುಸುಳಿ ಬಂದಿತ್ತು
ಮತ್ತೊಂದು ಕವನ||

ತನ್ನ ಹಸಿವನು ಮರೆತು
ತುತ್ತಿಕ್ಕಿ ಸಾಕಿದ 
ನನ್ನಮ್ಮನ ನೆನೆಯುತ್ತಾ ಸುರಿಸಿದ್ದ
ಕಣ್ಣೀರಿನ ಹನಿಗಳೊಂದು ಕವನ||

ವಾರಾನ್ನ ಬಿಕ್ಷಾನ್ನ ನೀಡಿ
ನನ್ನುಳಿಸಿ ಬೆಳೆಸಿ ಹರಸಿದ
ಅನ್ನದಾತರ ಮುಂದೆ
ಸಣ್ಣವನ ಬದುಕೊಂದು ಜೀವಂತ ಕವನ||