ಬದುಕೋ ವ್ಯವಸ್ಥೆ..!

ಬದುಕೋ ವ್ಯವಸ್ಥೆ..!

ಕವನ

ಸುತ್ತ್ ಮುತ್ಲೆಲ್ಲ ಇರೋದೆಲ್ಲ

ಕನ್ನಡ ಮೀಡಿಯಂ

ಹಾಸ್ಟೇಲ್ನಾಗ ಹಾಕ್ಬಿಟ್ಟೀವ್ನಿ

ಸ್ಕೂಲ್ ಇಂಗ್ಲೀಷ್ ಮೀಡಿಯಂ

 

ಹತ್ತಿಪ್ಪತ್ತು ವರ್ಷಕ್ಕೆಲ್ಲ

ಕೋಟಿ ಡೊನೆಷನ್ನು...

ಮನೆ ಕಡೆಕಂತು ಕರ್ಸ್ಕೊಂಡಿಲ್ಲ

ತಪ್ಪoಗಿಲ್ಲ ಟ್ಯೂಷನ್ನು

 

ಎದೆ ಮಟ್ಟಕ್ಕ ಬೆಳೆದವ್ನೀಗಾ

ಜಾಬು ಹುಡುಕ್ಬೇಕು

ಹಳ್ಳಿಲಂತು ಕೂರಂಗಿಲ್ಲ

ಬೆಂಗ್ಳೂರ್ಗೋಗ್ಬೇಕು

 

ಅಯ್ಯೋ ಪಾಪ ಕಷ್ಟಪಟ್ಟಿದ್ಕಾ

ಐ.ಟಿ ಒಳ್ಗ ಜಾಬಾಯ್ತು

ಮನೆ ಓಳ್ಗೆಲ್ಲ ದೀಪ ಹಚ್ಚಿ

ಪಾರ್ಟಿ ಜೋರಾಗ್ ಮಾಡಾಯ್ತು

 

ತಿಂಗಳ ಪಗಾರ ಲಕ್ಷದಾಗ

ಬ್ಯಾಂಕ್ ಅಕೌಂಟ ಸೇರ್ತಿತ್ತು

ಬಂಧುಗಳೆದುರು ಚರ್ವಿತ ಚರ್ವಣ

ಸಂಬಂಧಗಳು ದೂರಾಯ್ತು

 

ಕಂಪೆನಿ ಹುಡ್ಗಿನೆ ಸಿಕ್ಕವ್ಳೆಮ್ಮ

ಗ್ರ್ಯಾಂಡಾಗಿ ಮದ್ವಿ ನಡ್ದೋಯ್ತು

ಹಳ್ಳಿ ಬದುಕು ಬೇಡಾಗೋಯ್ತು

ಅಕೌಂಟ್ ಟ್ರಾನ್ಸ್‌ಫರ್ ನಿಂತೋಯ್ತು

 

ಅಪ್ಪಮ್ಮನ್ಗು ಏಜಾಗೋಯ್ತು

ನೋಡ್ಕೊಳ್ಳೊರು ಬೇಕಾಯ್ತು

ಓಲ್ಢೇಜ್ ಹೋಮು ಚೆನ್ನಾಗೈತೆ

ಸೇರ್ಸಿ ಕೈನಾ ತೊಳ್ದಾಯ್ತು!!

 

ಬಾಳಾಗಿಷ್ಟೆ ಮಕ್ಕಳ ಜೊತೇನ

ಐದು ವರ್ಷಾನು ಕಳ್ದಿಲ್ಲ

ಕೊಟ್ಟಿರೋ ಹಣಕ್ಕೆ ವಾಪಾಸಾತಿ

ಒಂದು ತಿಂಗ್ಳೂನು ಬಿಟ್ಟಿಲ್ಲ!

-ಜನಾರ್ಧನ ದುರ್ಗ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್