ಬದುಕ ಹಾದಿ...

ಬದುಕ ಹಾದಿ...

ಕವನ

ದಾರಿ ಬೆಳೆವುದು ನಾವು ಸಾಗಿದಂತೆ 

ಹಾರಿ ನಡೆಯುವ ಚಿಂತೆಯ ಸಂತೆ

 

ಕತ್ತಲ ಕರಗಿಸಿ ಬೆಳಕು ಬರುವಂತೆ

ಸುತ್ತಲ ಕುಹಕವ ಮೆಟ್ಟಿದರೆ ಜಯವಂತೆ.

 

ಬಲವ ಅರಿತು ನಮ್ಮ ನಡೆಯಿರಲಿ 

ಹಲವ ಸಾಧಿಸುವ ಗೊಂದಲ ಇರದಿರಲಿ

 

ಆರಿಸುವ ಆಯ್ಕೆ ನಮ್ಮದಾಗಿರಲಿ 

ಸೇರಿಸುವ ನಿರ್ಧಾರ ದೇವನದಾಗಿರಲಿ.

 

ನಿಯಮ ಗೆರೆಯ ಮೀರದೆ ನಡೆವ

ಜಯದ ಕನಸು ಹೊತ್ತು ದುಡಿವ 

 

ಮನವಿರಲಿ ನಮ್ಮ ಹತೋಟಿಯಲಿ

ಕನಸಿರಲಿ ಕಣ್ಣ ನೇರ ನೋಟದಲಿ.

 

-ನಿರಂಜನ ಕೇಶವ ನಾಯಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್