ಬನ್ನಿರಿ ಬನ್ನಿರಿ ನಾಳೆಗಳೆ..

ಬನ್ನಿರಿ ಬನ್ನಿರಿ ನಾಳೆಗಳೆ..

ಕವನ

ಬನ್ನಿರಿ ಬನ್ನಿರಿ ನಾಳೆಗಳೆ

ಹೊಸಕನಸುಗಳ ದಾರಿಗಳೇ

ತನ್ನಿರಿ ತನ್ನಿರಿ ಬಾಳ್ವೆಯಲಿ

ನವಶಪಥಗಳ ಪ್ರತಿಜ್ಞೆಗಳ

 

ಹೊಂಗಿರಣದ ಭರವಸೆಯಾಗಿ

ಕಾರ್ಮೋಡದ ತಂಪಾಗಿ 

ಮುಗಿಲ ಮಿಂಚು ಗುಡುಗುಗಳಾಗಿ

ಹೃಣ್ಮನ ಸೆಳೆಯುವ ಹಸಿರಾಗಿ

ಬನ್ನಿರಿ ಬನ್ನಿರಿ ನಾಳೆಗಳೆ..

 

ಇಳೆಬೆಳೆ ಸಂಗಮ ಮಳೆಹನಿಯೆ

ನೆಲೆಕಳೆ ಬೆಸೆದಿಹ ಕಾನನವೆ

ಕಾಣುವ ಕೌತುಕ ಹಲವಿಹುದು

ಸೇರುವ ತವಕದಿ ಮನಸಿಹುದು 

ಬನ್ನಿರಿ ಬನ್ನಿರಿ ನಾಳೆಗಳೆ..

 

ಸೊಬಗನು ದರ್ಶಿಸೋ ಕಾತುರದಲ್ಲಿ 

ಯುವಮನಸಿನ ಅಲೆದಾಟ 

ಬೆರಗಲಿ ಬಾನತ್ತ ಮುಖವನು ಮಾಡಿ

ಹಲವಿಧ ಖುಷಿಗಳ ಮೇಲಾಟ

ಬನ್ನಿರಿ ಬನ್ನಿರಿ ನಾಳೆಗಳೆ..

-’ಮೌನ ರಾಗ’ ಶಮೀರ್ ನಂದಿಬೆಟ್ಟ

 

ಚಿತ್ರ್