ಬನ್ನಿ ನಮ್ಮೂರ ನಾವು ನೋಡೋಣ! ನಮಗೆಷ್ಟು ಗೊತ್ತು ನಮ್ಮ ಊರ ಬಗ್ಗೆ ?
ನಮಸ್ಕಾರ ಬನ್ನಿ ನಮ್ಮೂರ ನೋಡೋಣ! ಅಂತ ಯಾರದ್ರು ಹೇಳಿದ್ರೆ ನಾವು ಹೇಳೋದೇನು? ಏನ್ರೀ ! ನಾನು ಇಲ್ಲೇ ಹುಟ್ಟಿ ಬೆಳೆದು ವಾಸವಾಗಿದ್ದೇನೆ ನನಗೆ ನಮ್ಮೂರು ನೋಡು ಅಂತ ಹೇಳ್ತಿರ! ಸ್ವಲ್ಪ ಯೋಚಿಸಿ ನಮ್ಮ ಊರಿನ ಸುತ್ತ ಮುತ್ತ ನಾವು ಏನೇನು ನೋಡಿದ್ದೇವೆ? ಎಷ್ಟೋ ಸಾರಿ ಯಾರದ್ರು ನಮ್ಮೂರಿಗೆ ಬಂದು ಏನಾದ್ರು ಮಾಹಿತಿ ಕೇಳಿದಾಗ ನಾವು ಎಷ್ಟೋಸಲ ಬೆಪ್ಪಾಗಿರುತ್ತೇವೆ! ಇದು ಯಾರಿಗಾದ್ರು ಅನುಭವ ಆಗಿರುತ್ತೆ! ಈಗ ಬನ್ನಿ ನಾವು ನಮ್ಮೂರ ಸುತ್ತ ಮುತ್ತ ಇರುವ ಸ್ಮಾರಕ, ದೇವಾಲಯ, ಇತಿಹಾಸ ಪ್ರದಾನ ಕುರುಹುಗಳು, ಊರಿನ ಇತಿಹಾಸ ಹೇಳುವ ಸಾಕ್ಷಿ ಕಲ್ಲುಗಳು, ಜಲಪಾತಗಳು, ಕಾಡುಗಳು, ನದಿಗಳು, ವ್ಯಕ್ತಿಗಳು, ಇನ್ನು ಹಲವಾರು ವಿಶೇಷ ಗಳನ್ನೂ ಎಷ್ಟು ನೋಡಿದ್ದೇವೆ? ವಿದೇಶ ನೋಡಿದ್ದರೂ ಸ್ವದೇಶ ನೋಡಿಲ್ಲ ಅಂತ ನಿಮಗೆ ಯಾವಾಗ ಅನ್ನಿಸಿದೆ? ನಿಮ್ಮೂರ ಸುತ್ತ ಮುತ್ತ ನೀವು ಗಮನಿಸಿರುವ ಅಥವಾ ನಿಮಗೆ ತಿಳಿದಿರುವ ಮಾಹಿತಿ ಏನು? ನಿಮ್ಮೂರ ಮಾಹಿತಿ ತಿಳಿಯದೆ ಬೇರೆಯವರ ಎದುರು ಬೆಪ್ಪಾದ ಪ್ರಸಂಗ ಇದೆಯೇ? ನಮ್ಮೂರ ಸುತ್ತ ಮುತ್ತ ನಾವೇಕೆ ನೋಡಬೇಕು? ಇತ್ಯಾದಿಗಳ ವಿಚಾರಮಂಥನ ಮಾಡೋಣ . ತೆಗೆಯಿರಿ ನಿಮ್ಮ ನೆನಪಿನ ಬತ್ತಳಿಕೆಯ ಬರಲಿ ಮಾಹಿತಿಯ ಶರ ಧಾರೆ. ವಂದನೆಗಳು ........ನಿಮ್ಮವ ನಿಮ್ಮೊಳಗೊಬ್ಬ ಬಾಲು.