ಬನ್ನಿ ಪತ್ರೆ
ಕವನ
ಬನ್ನಿ, ಬನ್ನಿ, ಬನ್ನಿ ಬನ್ನಿರೆಲ್ಲಾ.....
ಬನ್ನಿ ಪತ್ರೆ ಹಂಚೋಣ ನಾವೆಲ್ಲಾ
ಸರ್ವರ ಬಾಳು ಬಂಗಾರವಾಗಲೆಂದು
ಹಾರೈಸೋಣ ನಾವೆಲ್ಲಾ ಕೂಡಿಯಿಂದು
ಇತಿಹಾಸದ ಪುಟಗಳಲ್ಲಿ ಬನ್ನಿ ಮರವು
" ಪತ್ರೆ ಪತ್ರೆ" ಯಲ್ಲಿ ಅದರ ಸಿರಿತನವು
ಪ್ರೀತಿ, ಪ್ರೇಮ ಭಾವದಲ್ಲಿ ಹೃನ್ಮನವು
ಬೆಸೆಯೋಣ ಭಾವೈಕ್ಯತೆ ಅನುದಿನವು.
ಪಾಂಡವರವರ ಪರಾಕ್ರಮದ ಜಯದಲ್ಲಿ
ನ್ಯಾಯ ನೀತಿ,ಸತ್ಯ, ಧರ್ಮದ ವಿಜಯದಲ್ಲಿ
ಅಸುರ ಸಂಹಾರದ ವಿಜಯೋತ್ಸವವು
ಶ್ರೀರಾಮ, ಹನುಮರಿಗೆ ಮಹಾ ಸುದಿನವು.
ನವ ದುರ್ಗೆಯರು- ನವ ಭಾವದಲ್ಲವರು
ಹರಸುತ್ತಾ ಸಕಲರನ್ನು ಬಲುಮೆಯಲ್ಲವರು
ನಾಡದೇವಿಯ ದಿವ್ಯದೃಷ್ಟಿ ಅಂಬಾರಿಯಲ್ಲಿ
ಬನ್ನಿ ಮುಡಿಯ ಮಹಿಮೆ ವಿಜಯದಶಮಿಯಲ್ಲಿ.
ಬನ್ನಿರಿ ಬನ್ನಿರಿ ಬನ್ನಿರೆಲ್ಲಾ........
ಬನ್ನಿ ಪತ್ರೆ ಹಂಚೋಣ ನಾವೆಲ್ಲಾ
ಸಕಲ ಜೀವರಾಶಿಗೆ ಶುಭವ ಕೋರುತ್ತಾ
ಬನ್ನಿ ಪತ್ರೆ ಹಂಚೋಣ ಪ್ರೀತಿ ಸಾರುತ್ತಾ.
-ವೀಣಾ ಕೃಷ್ಣಮೂರ್ತಿ, ದಾವಣಗೆರೆ
ಚಿತ್ರ್
