ಬನ್ನಿ ಬನ್ನಿ ಸ್ನೇಹಿತರೆ

ಬನ್ನಿ ಬನ್ನಿ ಸ್ನೇಹಿತರೆ

ಕವನ

ಬನ್ನಿ ಬನ್ನಿ ಸ್ನೇಹಿತರೇ

ಮನೆಯ ಕದವು ತೆರೆದಿದೆ

ಗೋಡೆ ಮೇಲೆ ದೀಪ ಉರಿದು

ಮೈಮರೆತು ಕಳೆದಿದೆ

ಸ್ವಾಗತವನು ಕೋರಿದೆ

 

ಕರಿ ಗುಡ್ಡ ತಡಿಯ ಮನೆ

ಜಿನು ಜಿನುಗುವ ನೀರ ಝರಿಯು

ಹಸಿರ ಸಿರಿಯ ಹೊದಿಕೆ ಹೊದ್ದ

ತಂಪು ಹಿಂಪಿನ ನೆಲೆಯು

ಬನ್ನಿ ಬನ್ನಿ ಸ್ನೇಹಿತರೇ

 

ಒಲೆಯ ಮೇಲೆ ರಾಗಿ ರೊಟ್ಟಿ

ಬಿಸಿಹಾರದ ಭೋಜನವು

ಹಾಲು ತುಪ್ಪ ಸಂಡಿಗೆ

ರುಚಿ ಸವಿಯುವ ಜಾಗವು

ಬನ್ನಿ ಬನ್ನಿ ಸ್ನೇಹಿತರೇ

 

ನಡು ಗುಡ್ಡವ ಹತ್ತಿ ಬನ್ನಿ

ನೀರ ಝರಿಯ ಜಿಗಿದು ಬನ್ನಿ

ಕಾಲು ಹಾದಿ ತುಳಿದು ಬನ್ನಿ

ಬಂಡೆ ಹತ್ತಿ ಮುಂದೆ ಬನ್ನಿ

ಬನ್ನಿ ಬನ್ನಿ ಸ್ನೇಹಿತರೇ

 

ಇದೋ ತಂದೆ ಚಾಪೆಯನು

ಚಾಮರವ ವೀಯಲಾರೆ

ಮರೆಯದಿರಿ ಕಾಯುವೆನು

ಇತ್ತ ಒಮ್ಮೆ ಹೆಜ್ಜೆಯೂರಿ

ಬನ್ನಿ ಬನ್ನಿ ಸ್ನೇಹಿತರೇ

 

ಬದುಕುಘೋರ ಮನಸ್ಸುಭಾರ

ಎಲ್ಲ ಚಿಂತೆ ದೂರ ಮಾಡಿ

ಹಸಿರಮ್ಮನ ಮಡಿಲ ಸೇರಿ

ವಾತ್ಸಲ್ಯದಿ ಮುಳುಗುವ

ನಿಮಗಾಗಿ ಕಾಯುತಿಹೆ 

ಬನ್ನಿ ಬನ್ನಿ ಸ್ನೇಹಿತರೆ ಬನ್ನಿ ಬನ್ನಿ.

 

 

Comments