ಬಯಕೆ v/s ನಂಬಿಕೆ
ಬಯಕೆಯಿಲ್ಲದ ಬಡ್ದಿಹಯ್ದ ಅವನ್ಯಾವನಿಹನ್? ಅಂತ ಕೇಳ್ಮೆ ಕೇಳಿದರೆ 'ಯಾರೂ ಇಲ್ಲ' ಅಂತ ಉತ್ತರ ಸಿಕ್ಕುವುದು ನಿಕ್ಕುವ. ನಮ್ಮಲ್ಲಿ ಅದು ಬೇಕು(ಆಗ್ಬೇಕು) ಇದು ಬೇಕು ಅಂತ ಹತ್ತು-ಹಲವು ಬಯಕೆಗಳು ಮೂಡುವುದು ಸಹಜ. ಆದರೆ ಈ ಬಯಕೆಗಳನ್ನು ಈಡೇರಿಸಿಕೊಳ್ಳಲು ನಾವು ನಂಬಿರುವ ನಂಬಿಕೆಗಳನ್ನು ಬಲಿಗೆ ಕೊಡಬೇಕಾಗಿ ಬಂದರೆ? ಯಾವುದನ್ನು ಆರಿಕೊಳ್ಳಬೇಕು ಅನ್ನುವ ಗೊಂದಲ ನನಗೆ ಹಲವು ಸರ್ತಿ ಕಾಡಿದೆ. ಬಯಕೆನೋ ಇಲ್ಲ ನಂಬಿಕೆನೊ? ನಾವು ನಂಬಿರುವ ನಂಬಿಕೆಗಳಿಗೆ ದಕ್ಕೆ ಬಾರದೆ ನಮ್ಮ ಬಯಕೆಗಳು ಈಡೇರಿದರೆ ಏಸು ಚಂದ ಅಲ್ವ. ಆದ್ರೆ ಹಾಗೆ ಹಾಗೋದು ತುಂಬ ವಿರಳ. ಬಯಕೆಗಳು ಬಂದು ನಮ್ಮನ್ನು ಕಾಡಿ ನಂಬಿಕೆಗಳನ್ನು ಗಾಳಿಗೆ ತೂರಿಸಿ ನಮ್ಮ ಹೆಗಲ ಮೇಲೆ ಸವಾರಿ ಮಾಡುವಶ್ಟು ನಾವು ಬಯಕೆಗಳಿಗೆ ತೊತ್ತಿಗರಾಗಿರುತ್ತೇವೆ. ಹಿಂಗಿದ್ರೂ ಬಯಸಿ ಬಯಸಿ ಪಡೆದ(ಅಂದರೆ ನಂಬಿಕೆಯನ್ನು ಬಲಿಕೊಟ್ಟು)ಸರಕು ಮುಂದೆ ನಮಗೆ ಕೆಡುಕಾಗಿರುವ್ದು ಗೊತ್ತಿಲ್ಲದೇ ಇರುವಂತದ್ದಲ್ಲ. ಹಾಗಾದರೆ ಬಯಕೆ ಮತ್ತು ನಂಬಿಕೆ, ಇವುಗಳ ನಡುವೆ ತಿಕ್ಕಾಟ ಬಂದಾಗ ಯಾವುದನ್ನು ಆರಿಸಿಕೊಳ್ಳಬೇಕು? ನಿಮಗೇನಾದರೂ ಗೊತ್ತಾ? ಏನಾದರೂ ಹಱುವು/ಉಪಾಯಗಳಿವಿಯೇ? ಆ ಬಯಕೆಯಿಂದ ಸದ್ಯಕ್ಕೆ ನೆಮ್ಮದಿ ಸಿಕ್ಕಿದರೂ ಆಮೇಲೆ ಕೆಡುಕಾಗಬಹುದು.