ಬಯಸಿದ ಕಾಟ
ಕವನ
ಇನಿಯನಿಂದು ಬೆಳಗಿನಲ್ಲೆ
ಮನವ ಸೆಳೆದ ನುಡಿಯಲಿ
ಕನಸು ನೂರು ಚಿಗುರಿಕೊಂಡು
ತನುವು ಹಿಗ್ಗಿ ಖುಷಿಯಲಿ
ಎದೆಯ ತುಂಬ ಒಲವ ಲಹರಿ
ಮುದವ ಮನಕೆ ತರುತಿದೆ
ಹೃದಯ ವೀಣೆ ಮಿಡಿಯತೊಡಗಿ
ಮಧುರ ನಾದ ಹೊಮ್ಮಿದೆ
ಕಣ್ಣಿನಲ್ಲೆ ಸನ್ನೆ ಮಾಡಿ
ಬಣ್ಣ ಬಳಿದ ಕನಸಿಗೆ
ಕೆನ್ನೆ ಸವರಿ ಸಲುಗೆಯಿಂದ
ಹಣ್ಣು ಎನುವ ಕೆನ್ನೆಗೆ
ಬೇಡವೆನಲು ಬಿಡುವನೇನು
ನೀಡುತಿರುವ ಕಚಗುಳಿ
ಕಾಡುತಿರಲು ಕೂಡಿಕೊಂಡೆ
ಓಡಿ ಹೋಯ್ತು ಮೈಚಳಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್