ಬರಗಾಲ
ಕವನ
ಧರೆ ಬಿರಿದಿದೆ, ದಾಹ ತುಂಬಿದೆ
ಹಸಿವು ಕೆರಳುತ್ತಿದೆ, ಬಿಸಿಲು ಬೇನೆಯಾಗಿದೆ,
ನಿರಿಕ್ಷೆ ನಿಟ್ಟುಸಿರಾಗಿ ಭ್ರಮನಿರಸನ ಹುಟ್ಟಿಸಿದೆ,
ವ್ಯವಸ್ಥೆ ಅನಿರಿಕ್ಷಿತ ಅವತಾರ ತಾಳಿದೆ.
ನರಳುವವರ ಸಾಂತ್ವನಕ್ಕೆ ,ಪೈಪೋಟಿ
ಕೆರೆಚಾಟ ಅರಚಾಟ ಭರದಾಟ ಸರದಿ ಆಟ
ಮಾನವತೆ ನಾಚುವ ನಗೆದಾಟ
ಜವಾಬ್ದಾರಿ ತ್ಯಜಿಸಿದ ಆಡಳಿತರೂಧದಾಟ.
ಪ್ರಜೆಯ ಪ್ರಾಣಕ್ಕೆ ಪಾಪದ ಲೇಪನ
ಕೊಟ್ಟ ಓಟಿಗೆ ಕಟ್ಟಿದ ಬೆಲೆಸಮಾನ
ಅಧಿಕಾರದಾಹಕ್ಕೆ ಮುಂದಿನ ಚುನಾವಣೆಯ
ಕುಟಿಲೋಪಾಯಕ್ಕೆ ದೊರೆಯ ಸಾಂತ್ವನ.
ಯಾರು ಸತ್ತರೇನು ಇದ್ದರೇನು
ಮಾಫಿಯಗಳ ಅವತಾರ
ಕೞ ಕೊರಮರ ವ್ಯವಹಾರ
ಇದುವೇ ನಮ್ಮ ರಾಜಕಾರಣಿಗಳವ್ಯವಹಾರ
Comments
ಉ: ಬರಗಾಲ