ಬರದಿರು ವಸಂತಮಾಸವೆ

ಬರದಿರು ವಸಂತಮಾಸವೆ

ಕವನ

ಬರದಿರು ಮತ್ತೆ ವಸಂತಮಾಸವೆ

ತಳಿರು ತೋರಣ ಒಣಗಿದೆಯಿಂದು

ಬಾಳಿನ ಪಲ್ಲವಿ ಹೆಜ್ಜೆಯು ತಪ್ಪಿದೆ

ಕಾರಣ ತಿಳಿಯದೆ ಸೋತಿಹೆನಿಂದು

 

ಬಣ್ಣದ ಬದುಕಲಿ ಸೂತ್ರವು ಇಲ್ಲದೆ

ವಿಲಿವಿಲಿ ಹೊರಳುತ ಬಾಳುತಲಿಂದು

ಗಾನವು ಇಲ್ಲದೆ ಮೇಳವು ಎಲ್ಲಿದೆ

ಮೋಹದ ಪರದೆಯು ಸುಡುತಲಿಯಿಂದು

 

ತಪ್ಪನು ಮಾಡದೆ ಒಪ್ಪಿಕೊಯೆಂಬರೆ

ಅಪ್ಪಿಕೊ ಎನ್ನುತ ಯೌವನ ಸವಿದರು

ಯಾರಿಗೆ ಹೇಳುತ ಸಾಗಲಿ ನೋವಲೆ 

ಅಮೃತ ಸವಿಯನು ಬೇಡದೆ ಪಡೆದರು

***

ಹನಿಗಳು

ಗೂಡು ಸೇರುವ

ಪ್ರತೀ ಜೀವಿಗಳಿಗೂ

ಕತ್ತಲ ಭಯ!

***

ಪ್ರತೀ ಮನೆಯೂ

ಪ್ರಣಯ ರಂಗಭೂಮಿ

ಪ್ರೀತಿಯೊಂದಿರೆ !

***

ಕಾವ್ಯ ಹುಟ್ಟುತ್ತ

ಸಿರಿವಂತ, ಕವಿಯೋ 

ಬಡವನಾದ !

***

ಮತ್ತೇರಿದಳು

ಹುಡುಗಿ, ಹುಡುಗನು

ದಡ ಸೇರಿದ ! 

***

ಮೌನದೊಳಗೆ

ಮನ ಸೇರಿದಾಗಲೇ

ಮಾತು ನಿಂತಿತು ! 

***

ನಲಿವಿನಲ್ಲಿ

ನೋವಿದೆಯೆಂದರೆ , ನಾ

ಬದುಕಲಾರೆ

***

ಕನಸುಗಳು

ಇರಬೇಕು, ನಡುವೆ

ನನಸುಗಳು !

***

ಅರ್ಬುದ

ರಾಜಕೀಯ

ಜನ

ಸಾಮಾನ್ಯರಿಗೆ

ಅರ್ಬುದ

ಇದ್ದಂತೆ !

-ಹಾ ಮ ಸತೀಶ ಬೆಂಗಳೂರು

ಚಿತ್ರ್