ಬರಲಿದೆ, ಮಗದೊಂದು ಕನ್ನಡ ತಂತ್ರಾಂಶ...

ಬರಲಿದೆ, ಮಗದೊಂದು ಕನ್ನಡ ತಂತ್ರಾಂಶ...

Comments

ಬರಹ

ಇನ್ನು ಹದಿನೈದು ದಿನಗಳಲ್ಲಿ [:http://vijaykarnatakaepaper.com/pdf/2007/02/09/20070209a_015101003.jpg|ಕನ್ನಡಕ್ಕೆ ಮತ್ತೊಂದು ತಂತ್ರಾಂಶ ಬಿಡುಗಡೆಯಾಗಲಿದೆ] ಎಂದು ವಿಜಯಕರ್ನಾಟಕ ಇಂದು ವರದಿ ಮಾಡಿದೆ. ರಾಷ್ಟ್ರಕವಿ ಕುವೆಂಪುರವರ ಹೆಸರು ಹೊತ್ತ ಈ ಹೊಸ ತಂತ್ರಾಂಶ ಕೆಲವು ಹೊಸತುಗಳನ್ನ ನೀಡಲಿದೆಯಂತೆ.

ತಂತ್ರಾಂಶದ ಪ್ರಮುಖಗಳು (ಲೇಖನ ತಿಳಿಸುವಂತೆ):
* ನಾಲ್ಕು ಲಿಪಿಗಳಿಗೂ ಪರಿವರ್ತಕ (converter) - ನುಡಿ, ಬರಹ, ಶ್ರೀಲಿಪಿ
(ನಾಲ್ಕನೆಯದು ಲೇಖನದಲ್ಲಿ ಉಲ್ಲೇಖಿಸಿದ್ದು ಕಾಣಲಿಲ್ಲ - ಬಹುಶಃ 'ಪ್ರಜಾಮತ' ಅಥವ CRG ರವರ ಫಾರ್ಮ್ಯಾಟ್ ಇರಬೇಕು.)
* ಇನ್ನಾರು ತಿಂಗಳಲ್ಲಿ ಯೂನಿಕೋಡ್ ಬೆಂಬಲವೂ ಸೇರುವುದಂತೆ.

ಯೂನಿಕೋಡ್ ಬೆಂಬಲದೊಂದಿಗೆ ಈ ತಂತ್ರಾಂಶ ಈಗಲೇ ಹೊರಬರುವುದಿಲ್ಲವೆಂದು ಓದಿ ಬೇಸರವಾಯ್ತು. ಆದರೆ ಸಾಕಷ್ಟು ಸಕಾರಾತ್ಮಕ ಸವಲತ್ತುಗಳಿದ್ದಂತಿದೆ! ಕುತೂಹಲದಿಂದ ನಿರೀಕ್ಷಿಸೋಣ :)

ತಂತ್ರಾಂಶವನ್ನು ಅವರು [:http://www.gnu.org/copyleft/gpl.html|GPLನ ಅಡಿ ರಿಲೀಸ್ ಮಾಡಿದರೆ] ಉಳಿದವರೂ ಅದರ ಅಭಿವೃದ್ಧಿಯಲ್ಲಿ ಭಾಗವಹಿಸಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet