ಬರಿದಾಗುತ್ತಿದೆ ನದಿಯ ಮಡಿಲು...
ಕವನ
ನೋಡಿದಿರೇನು ನದಿಯ ಒಡಲು
ಬರಿದಾಗಿ ಹೋಗಿದೆ ಮಡಿಲು
ಭೋರ್ಗರೆಯಬೇಕಿತ್ತು ಹಾಲ್ಗಡಲು
ಮುಂದೆ ಸಾಗಿ ಸೇರಲು ಕಡಲು
ಸ್ನಾನ ಪಾನಾದಿಗಳಿಗೆ ಬೇಕು ನೀರು
ವನ್ಯಜೀವಿಗಳಿಗಂತೂ ಉಳಿಸಲಿಲ್ಲ ಚೂರು
ಸುತ್ತ ಮಾನವನದ್ದೇ ಕಾರುಬಾರು
ಹೀಗೆ ಸಾಗಿದರೆ ಬಿಡಬೇಕಾದೀತು ಊರು
ದೈವವನು ನೀವು ಜರಿಯುತ
ಮೌಲ್ಯಗಳ ಸದಾ ಮರೆಯುತ
ಕುಡಿದು ಕುಣಿದು ನಲಿಯುತ
ಸೋದರತೆಯ ತೊರೆದು ಬಡಿದಾಡುತ
ಆತ್ಮಸಾಕ್ಷಿ ಯನ್ನು ತೊರೆದು
ಕ್ರೂರ ಕೃತ್ಯಗಳಲ್ಲಿ ಮೆರೆದು
ಪ್ರಾಣಿ ಪಕ್ಷಿಗಳನ್ನು ಇರಿದು
ಸತ್ಯ ಅಸತ್ಯಗಳ ಜರಿದು
ಸಾಗಿದರಾಯಿತೆ ಬದುಕು
ಪ್ರಕೃತಿಯ ಅರಿಯಬೇಕು
ಗಿಡ ಮರಗಳ ಉಳಿಸಲೇಬೇಕು
ಉಳಿಸಿ ನಾವು ಬದುಕಬೇಕು.
-ಕೆ. ವಾಣಿ ಚನ್ನರಾಯಪಟ್ಟಣ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್