ಬರಿಯ ನೆನಪಾಗಿ ಉಳಿವೆನು

ಬರಿಯ ನೆನಪಾಗಿ ಉಳಿವೆನು

ಕವನ

ಎಲ್ಲಿ ಮರೆಯಾಗಿರುವೆ ಓ  ನನ್ನ ಗೆಳೆಯ ..

ನೀನಿಲ್ಲದೆ ನೋಯುತಿದೆ ನನ್ನೀ ಮನವು..

ಕಣ್ಣು ಮನಸಲ್ಲೆಲ್ಲ ನಿನ್ನನ್ನೇ ತುಂಬಿಕೊಂಡು..

ಎದುರು ನೋಡುತಿರುವೆ ನಿನಗಾಗಿ ಗೆಳೆಯ ..

 

ನಿನ್ನ ಪ್ರೀತಿಯಲಿ ಮುಳುಗಿ ಹುಚ್ಚಿಯಂತಾಗಿರುವೆ 

ಅಮಾವಾಸ್ಯೆಯ ದಿನ ಪೂರ್ಣಚಂದ್ರನ ಹುಡುಕುತಿರುವೆ..

ನನ್ನೊಳಗೆ ನಾನಿಲ್ಲ ನನ್ನ ನಾ ಮರೆತಿರುವೆ

ನೀನಿರದ ಈ ಜೀವನ ನಶ್ವರ ನಶ್ವರ..

 

ಕಣ್ತೆರೆದು ಕಣ್ಣೀರ ಹಾಕಲು ಹೆದರುತಿಹೆನು

ಕಣ್ಣೀರಿಟ್ಟರೆ ಕಣ್ಣ ಒಳಗಿರುವ ನೀನೆಲ್ಲಿ ಜಾರಿ

ಹೋಗುವೆಯೆಂಬ ಭಯದಿ ಕೊರಗಿ ಕೊರಗಿ

ಭಾರವಾಗಿದೆ ಮನವೆಲ್ಲ ಗೆಳೆಯ...

 

ಕಾಯಿಸದಿರು ಅತಿಯಾಗಿ ನನ್ನ...

ನಿನ್ನಗಲಿ ಬೇಡವಾಗಿದೆ ನನಗೀ ಜೀವನ..

ನಿನಗಾಗಿ ಪ್ರಾಣವ ಹಿಡಿದು ಕುಳಿತಿರುವೆನು..

ಸಮಯ ಮಿಂಚಿದರೆ ಬರಿಯ ನೆನಪಾಗಿ ಉಳಿವೆನು

Comments