ಬರುತ್ತಾರೆ ಬರುತ್ತಾರೆ...

ಬರುತ್ತಾರೆ ಬರುತ್ತಾರೆ...

 

ಕನ್ನಡ ನವ್ಯಕಾವ್ಯ ಪರಂಪರೆಯ ಹರಿಕಾರ ಗೋಪಾಲಕೃಷ್ಣ ಅಡಿಗರ ಕಾವ್ಯದ ಒಂದು ಟ್ರೇಡ್ ಮಾರ್ಕ್ ಮೊನಚಾದ ವ್ಯಂಗ್ಯ . ಆದರೆ ಕನ್ನಡದ ಭಾವಗೀತೆಯ ಹಾಡುಗಾರರು ಅಡಿಗರ ಮೊದಮೊದಲಿನ ಭಾವಗೀತಾತ್ಮಕ ರಚನೆಗಳನ್ನಷ್ಟೆ ಹಾಡುವುದರಿಂದ ಭಾವಗೀತೆಯ ಕೇಳುಗರು, ಅವರ ಗಂಭೀರ ಕಾವ್ಯದ ಓದುಗರೂ ಕೂಡ ಅಲ್ಲದಿದ್ದರೆ, ಅಡಿಗರ ನಿಜವಾದ ಕಾವ್ಯಶೈಲಿಯನ್ನ ಆಸ್ವಾದಿಸಿರುವ ಸಾಧ್ಯತೆ ಕಡಿಮೆ. ಗಾಯಕ ಚಂದ್ರಶೇಖರ ಕೆದ್ಲಾಯರ ದನಿಯಲ್ಲಿ ಅಡಿಗರ "ಬರುತ್ತಾರೆ" ಕವನದ ಗಾಯನದಲ್ಲಿ ಆ ತೀಕ್ಷ್ಣ ವ್ಯಂಗ್ಯ ಚೆನ್ನಾಗಿ ಮೂಡಿಬಂದಿದೆ. ಇಲ್ಲಿದೆ ಕೇಳಿ..

http://www.youtube.com/watch?v=BMi1VDyYXSk

Comments

Submitted by ರಾಮಕುಮಾರ್ Mon, 03/18/2013 - 09:55

"ಮೇಷ್ಟ್ರನ್ನೇ ಕೋದಂಡಕ್ಕಿಕ್ಕಿ …" "ಯೋಜನೆಗಳ ಯಜ್ಞದಲ್ಲಿ ವಪೆಯ ರುಚಿಯನರಿತವರು…" ಕೋದಂಡವೆಂದರೆ ಒಂದು ಬಗೆಯ ಶಿಕ್ಷೆಯಿರಬೇಕು.ತಿಳಿದವರು ದಯವಿಟ್ಟು ಮಾಹಿತಿ ನೀಡಬೇಕು. ಅಂತೆಯೇ ಯಜ್ಞದಲ್ಲಿ ವಪೆಯನ್ನು ತಿನ್ನುವ ಪರಿಪಾಠವಿತ್ತೆ?
Submitted by partha1059 Mon, 03/18/2013 - 12:04

In reply to by ರಾಮಕುಮಾರ್

ಕೋದಂಡ, ಕುರ್ಚಿ ಕೂಡಿಸುವುದು ಇವೆಲ್ಲ ಹಿಂದ ಹಳ್ಳಿಯ ಮಾಸ್ತರುಗಳು ಕೊಡುತ್ತಿದ್ದ ಸರಳ ಶಿಕ್ಷೆ.

ಬೆನ್ನನ್ನು ಬಿಲ್ಲಿನಂತೆ (ಕೋದಂಡ !) ಬಗ್ಗಿಸಿ, ಎರಡು ಕೈಗಳನ್ನು ಕಾಲ ಸಂದಿಯಲ್ಲಿ ಹಿಂದಿನಿಂದ ತೂರಿಸಿ, ಕೈಗಳಿಂದ ಕಿವಿ ಹಿಡಿದು ಅದೆ ಬಂಗಿಯಲ್ಲಿ, ಸ್ವಲ್ಪ ಕಾಲ ಇರುವುದು ಇದು ಕೋದಂಡ

ಹಾಗೆ ಕುರ್ಚಿ ಇಲ್ಲದಿದ್ದರು, ಕುರ್ಚಿಯಲ್ಲಿ ಕುಳಿತಿರುವ ಬಂಗಿಯಲ್ಲಿ ಕಾಲ ಮೇಲೆ ನಿಲ್ಲುವುದು (ಗೋಡೆಯ ಆಸರೆ ಇಲ್ಲದೆ) ಕುರ್ಚಿ ಕೂಡಿಸುವುದು. ಹೀಗೆ ಇರುತ್ತಿದ್ದವು ಆ ಶಿಕ್ಷೆ ಸಾಮಾನ್ಯವಾಗಿ ವ್ಯಾಯಾಮರೂಪದಲ್ಲಿರುತ್ತಿತ್ತು.

ಈಗ ಕಾಲ ಪೂರ್ಣ ಬದಲಾಗಿದೆ, ಹಳೆಯ ಮಾಸ್ತರರು ಇಲ್ಲ, ವಿಧ್ಯಾರ್ಥಿಗಳು ಆಗಿನವರಲ್ಲ, ಇಬ್ಬರು ಬದಲಾಗಿದ್ದಾರೆ ಹಾಗಾಗಿ ಆ ಶಿಕ್ಷೆಗಳೆಲ್ಲ ಸರಿಯೊ ಅಥವ ತಪ್ಪೊ ಎನ್ನುವ ಚರ್ಚೆ ಅಸಂಗತ, ಹಾಗು ಅರ್ಥವಿಲ್ಲದ ಕ್ರಿಯೆ

Submitted by ರಾಮಕುಮಾರ್ Mon, 03/18/2013 - 12:28

In reply to by partha1059

ಪಾರ್ಥವರೆ, ನಿಮ್ಮ ಮಾಹಿತಿಗೆ ತುಂಬ ಧನ್ಯವಾದಗಳು. ಇನ್ನು ಗುರು-ಶಿಷ್ಯರ ಸಂಭಂಧ, ಶಿಕ್ಷೆಯ ಬಗ್ಗೆ ಅಲ್ಲಮನ ಈ ವಚನ ನೆನಪಾಯಿತು... ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ. ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ. ದ್ವಾಪರ ಯುಗದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ. ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ. ಗುಹೇಶ್ವರ, ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆಱಗಾದೆನು.