ಬರುವುದಿಲ್ಲ ಹಳೆಯ ಕಾಲ
ಕವನ
ಬರುವುದಿಲ್ಲ ಹಳೆಯ ಕಾಲ
ಹೊಸದರತ್ತ ಸಾಗುತ
ಹೃದಯವನ್ನು ತೆರೆದು ಇಡುತ
ಹೊಸಬರಿಗೆ ಸ್ವಾಗತ
ನೂರು ಪಯಣದಾಚೆಯೆಲ್ಲೊ
ಭಗ್ನ ತನುವ ನೋಡಿದೆ
ಮನವೆ ಇರದ ಬಾಳಿನಲ್ಲಿ
ಬದುಕು ಅಳುತ ನೊಂದಿದೆ
ನಿನ್ನೆವರೆಗೂ ಅವಳ ನಗು
ಬೆಸುಗೆಯೊಳಗೆ ಬೀಗಿತು
ಇಂದು ಎಲ್ಲೊ ಕಿಟಿಕಿಯಾಚೆ
ನಿಂತು ಕುಹಕವಾಡಿತು
ಚೆಲುವು ಇದ್ದರೇನು ಬಂತು
ಪ್ರೀತಿಯೊಲವು ಬೇಕಿದೆ
ಪ್ರೇಮವೆನುವ ತಾಳ್ಮೆ ಸಹನೆ
ಜೊತೆಗೆ ಸಾಗಬೇಕಿದೆ
ಮೋಡಿಯಿರದ ಭಾವನೆಗಳ
ಹೊದ್ದರೇನು ಈ ದಿನ
ಮಾತು ಮಾತಿನೊಳಗೆ ಬೇವು
ವ್ಯರ್ಥವಾಯ್ತು ಜೀವನ
***
ಹನಿಗಳು
ಸಣ್ಣವನಾಗುತ್ತಲೇ ಕೂರಬೇಡ
ಬಲ್ಲಿದವರ ಜೊತೆ ವಾದಬೇಡ
ಜೊತೆಗಾರರ ಪ್ರೀತಿಯ ಗಳಿಸು
ದ್ವೇಷಗಳ ನಡುವೆ ಸಾಯಬೇಡ
ಬಂದಿತೇಕೆ ಸ್ವಾತಂತ್ರ್ಯ
ತೊಡೆಯಲಿಲ್ಲ ದ್ವೇಷ
ತಲೆಯೆತ್ತಿದೆ ಮತ್ತೆ
ಸ್ವಾಹಿತದೊಳು ತಂತ್ರ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್