ಬರುವುದಿಲ್ಲ ಹಳೆಯ ಕಾಲ

ಬರುವುದಿಲ್ಲ ಹಳೆಯ ಕಾಲ

ಕವನ

ಬರುವುದಿಲ್ಲ ಹಳೆಯ ಕಾಲ

ಹೊಸದರತ್ತ ಸಾಗುತ

ಹೃದಯ ಪ್ರೀತಿಯನ್ನು ಕೊಡುತ

ಹೊಸಬರಿಗೆ ಸ್ವಾಗತ

 

ನೂರು ಪಯಣದಾಚೆಯೆಲ್ಲೊ

ಭಗ್ನ ತನುವ ನೋಡಿದೆ

ಮನವೆ ಇರದ ಬಾಳಿನಲ್ಲಿ

ಬದುಕು ಅಳುತ ನೊಂದಿದೆ 

 

ನಿನ್ನೆವರೆಗೂ ಅವಳ ನಗು

ಬೆಸುಗೆಯೊಳಗೆ ಬೀಗಿತು

ಇಂದು ಎಲ್ಲೊ ಕಿಟಿಕಿಯಾಚೆ

ನಿಂತು ಕುಹಕವಾಡಿತು

 

ಚೆಲುವು ಇದ್ದರೇನು ಬಂತು

ಒಲವ ಚೆಲುವು ಬೇಕಿದೆ

ಪ್ರೇಮವೆನುವ ತಾಳ್ಮೆ ಸಹನೆ

ಜೊತೆಗೆ ಸಾಗಬೇಕಿದೆ

 

ಮೋಡಿಯಿರದ ಭಾವನೆಗಳ 

ಹೊದ್ದರೇನು ಈ ದಿನ 

ಮಾತು ಮಾತಿನೊಳಗೆ ಬೇವು

ವ್ಯರ್ಥವಾಯ್ತು ಜೀವನ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್