ಬರುವೆ ನಾ....
ಕವನ
ಬರುವೆ ನಾss.. ನಿನ್ನ ಬಳಿಗೆ ... ನೀರಿನ ಅಲೆಗಳ ಹಾಗೆ...
ಮುತ್ತನಿಡಲು ನಿನ್ನ ಕಾಲಿಗೆ ... ಹೂವಿನ ದುಂಬಿಯ ಹಾಗೆ...
ನಿನ್ನ ರೂಪದಾ ಕಾವ್ಯದಲಿ.. ಅಡಗಿರುವ ಸಾಲು ನಾನು.
ನನ್ನ ಹೃದಯದಾ ಕೋಟೆಯಲಿ.. ಅಡಗಿರುವ ಶಿಲೆಯು ನೀನು.
ನನ್ನ ಉಸಿರಿನ ಮೌನದಲಿ.. ಹೊಮ್ಮಿದ ನಾದ ನೀನು.
ನಿನ್ನ ಹೆಸರಿನ ನೆನಪಲಿ.. ಮಾತು ಮರೆತ ಮೌನಿ ನಾನು.
ಬರಬಾರದೆ ನನ್ನ ಬಳಿಗೆ.. ಹೇಳಲು ಪ್ರೇಮದ ನಿವೇದನೆ.
ಹೇಳುವೆ ನಾ ನಿನಗೆ ಆಗ.. ಹೇಳಲಾರದ ಮೌನದ ವೇದನೆ..!!!
:-ವಿಶ್ವನುಡಿ