ಬರೆದ ಸಾಲುಗಳೆಲ್ಲ

ಬರೆದ ಸಾಲುಗಳೆಲ್ಲ

ಕವನ

 


ಬರೆದ ಸಾಲುಗಳೆಲ್ಲ ಕವನವಲ್ಲವೊ ಗೆಳೆಯ

ಅಕ್ಷರಗಳಾಟವದು ಮರೆಯಬೇಡ

ಉಕ್ಕೊ ಭಾವಕ್ಕಡ್ಡ ಹಿಡಿದ ಬಿಂದಿಗೆಯದು

ಹೆಚ್ಚು ಸಿಕ್ಕಿದರದೇ ಗೆಲುವು ನೋಡ

ಅವನು ಮೆಚ್ಚುವನೆಂಬ ಭ್ರಮೆಯು ಬೇಡ|೧|

 

ಜ್ಞಾನಸಾಗರದಲ್ಲಿ ಚಿಪ್ಪ ಹುಡುಕುವ ನಾವು

ಸಿಕ್ಕಿಹುದು ಕೆಲವರಿಗೆ ಒಳ್ಳೆ ಮುತ್ತು

ಕವಡೆಗಳು ಕೆಲವರಿಗೆ ಕೆಲಕಾಲದೊರೆಗೆ

ದಡದಲ್ಲೇ ನಿಂತವಗೆ ಉಸುಕಿನಲೆ ಮಸುಕಾದ

ಆಕಾರ ಕಂಡಿಹುದು ಸೃಷ್ಟಿಯಂತೆ|೨|

 

ಬರೆಯುವುದು ಸಹಜ,

ಮೆಚ್ಚುವಿಕೆಗಿಲ್ಲ ಸಜ

ಬರೆದು ಬೆಳೆದಾನೆಂಬ ಮಾತ್ಸರ್ಯವೇಕೆ?

ನಾನೆ ಬರೆಯುವೆನೆಂದು ಬೀಗ ಬೇಕೆ?|೩|